Wednesday, February 11, 2026
26.6 C
Bengaluru
Google search engine
LIVE
ಮನೆ#Exclusive NewsTop Newsಕೆಎಸ್‌ಡಿಎಲ್ ರಾಯಭಾರಿಯಾಗಿ ಮಿನುಗಿದ ನಟಿ ತಮನ್ನಾ;ಮಿಲ್ಕಿ ಬ್ಯೂಟಿ ಹೊಸ ಅಧ್ಯಾಯ

ಕೆಎಸ್‌ಡಿಎಲ್ ರಾಯಭಾರಿಯಾಗಿ ಮಿನುಗಿದ ನಟಿ ತಮನ್ನಾ;ಮಿಲ್ಕಿ ಬ್ಯೂಟಿ ಹೊಸ ಅಧ್ಯಾಯ

ಬೆಂಗಳೂರು : ಮೈಸೂರಿನ ಹೆಮ್ಮೆಯ ಗುರುತು ಮೈಸೂರು ಸ್ಯಾಂಡಲ್ ಸೋಪ್‌ಗೆ ಈಗ ಗ್ಲಾಮರ್ ಮೆರುಗು ಸಿಕ್ಕಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ಐತಿಹಾಸಿಕ ಬ್ರಾಂಡ್‌ನ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ತಮನ್ನಾ ಅವರು ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪನ್ನು ಬಿಡುಗಡೆ ಮಾಡಿದರು. ವೇದಿಕೆಯ ಮೇಲೆ ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ನಟಿ ಸಭಿಕರ ಗಮನ ಸೆಳೆದರು. ಮೈಸೂರು ಸ್ಯಾಂಡಲ್ ಸೋಪ್ ಕೇವಲ ಒಂದು ಉತ್ಪನ್ನವಲ್ಲ, ಅದೊಂದು ಭಾವನೆ ಮತ್ತು ಬಾಲ್ಯದ ನೆನಪು ಎಂದು ಅವರು ಈ ಸಂದರ್ಭದಲ್ಲಿ ಬಣ್ಣಿಸಿದರು.

ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ತಮನ್ನಾ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಕುಟುಂಬದ ಭಾಗವಾಗುತ್ತಿರುವುದು ತಮ್ಮ ವೃತ್ತಿಜೀವನದ ಹೊಸ ಅಧ್ಯಾಯ ಮತ್ತು ತಮಗೆ ಸಿಕ್ಕ ಗೌರವ ಎಂದು ಸಂತಸ ಹಂಚಿಕೊಂಡರು. ಮಾರುಕಟ್ಟೆಗೆ ಎಷ್ಟೇ ಆಧುನಿಕ ಸೋಪ್‌ಗಳು ಬಂದರೂ, ಜನರ ಹೃದಯದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಹೊಂದಿರುವ ಸ್ಥಾನ ಅಚಲವಾದುದು ಎಂದು ಅಭಿಪ್ರಾಯಪಟ್ಟರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments