ಕೆಲವರು ಅದ್ಯಾಕಿಂಗಾಡ್ತಾರೋ ಕಾಣೆ? ಯುವನಟಿಯೊಬ್ಬರು ಅಡ್ಡದಾರಿ ಹಿಡಿದು ಈಗ ಕಂಬಿ ಎಣಿಸುವಂತಾಗಿದೆ. ತೆಲುಗಿನ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದ ಯುವ ನಟಿ, ಹೀರೋಯಿನ್ ಸೌಮ್ಯ ಶೆಟ್ಟಿ(Actress Soumya Shetty) 1 ಕೆಜಿ ಚಿನ್ನ ಕದ್ದ ಆರೋಪದ ಮೇಲೆ ವಿಶಾಖಪಟ್ಟಣದಲ್ಲಿ ಅರೆಸ್ಟ್ ಆಗಿದ್ದಾರೆ.
ನಿವೃತ್ತ ಪೋಸ್ಟಲ್ ಉದ್ಯೋಗಿ ಪ್ರಸಾದ್ ಎನ್ನುವವರ ಮನೆಯಲ್ಲಿ ಒಂದು ಕೆಜಿಯಷ್ಟು ಚಿನ್ನಾಭರಣ ದೋಚಿ.. ಅದೇ ವೇಗದಲ್ಲಿ ಗೋವಾಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಸೌಮ್ಯ ಶೆಟ್ಟಿಯನ್ನು ವೈಜಾಗ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಯುವರ್ಸ್ ಲವಿಂಗ್ಲಿ (Yours lovingly) ಎನ್ನುತ್ತಾ ಪ್ರಸಾದ್ ಎನ್ನುವವರ ಪುತ್ರಿ ಜೊತೆ ಆಡಿಷನ್ ಹೆಸರಲ್ಲಿ ಪರಿಚಯ ಬೆಳೆಸಿಕೊಂಡಿದ್ದ ನಟಿ ಸೌಮ್ಯಾ ಶೆಟ್ಟಿ ಆಗಾಗ ಅವರ ಮನೆಗೆ ಬಂದು ಹೋಗ್ತಿದ್ಲು.. ಪ್ರಸಾದ್ ಕುಟುಂಬದ ಲೈಫ್ ಸ್ಟೈಲ್ ನೋಡಿ ಮನೆಯಲ್ಲಿ ಚಿನ್ನಾಭರಣ ಹೆಚ್ಚಿದೆ ಎಂಬುದನ್ನು ತಿಳಿದುಕೊಂಡ ಸೌಮ್ಯಾಶೆಟ್ಟಿ ಪದೇ ಪದೇ ಪ್ರಸಾದ್ ಮನೆಯನ್ನು ಕಣ್ಣಾಡಿಸ್ತಿದ್ಲು. ಹಲವಾರು ಬಾರಿ ವಾಷ್ ರೂಂ ಯೂಸ್ ಮಾಡಿದ್ಲು..
ಮೊನ್ನೆ ಮದ್ವೆಯೊಂದಕ್ಕೆ ಹೋಗಲು ಪ್ರಸಾದ್ ಕುಟುಂಬಸ್ಥರು ರೆಡಿ ಆಗ್ತಿದ್ರು. ಆಭರಣ ಧರಿಸೋಣ ಅಂತಾ ನೋಡಿದ್ರೆ ಅಲ್ಲಿ ಚಿನ್ನಾಭರಣಗಳೇ ಇಲ್ಲ.. ಎಲ್ರೂ ಮನೆಲಿ ಇದೇವೆ.. ಆದರೂ ಚಿನ್ನಾಭರಣ ಮಾಯವಾಗಿದೆ..
ಇದೆಂಥಾದ್ದು ಮಾರಾಯ್ರೆ ಎಂದು ತಲೆ ಕೆಡಿಸಿಕೊಂಡ ಕುಟುಂಬಕ್ಕೆ ಮೊದಲು ಅನುಮಾನ ಬಂದಿದ್ದೇ, ಆಗಾಗ ಮನೆಗೆ ಬಂದು ಹೋಗ್ತಿದ್ದ ಹೀರೋಯಿನ್ ಸೌಮ್ಯ ಶೆಟ್ಟಿ ಮೇಲೆ.. ಪ್ರಸಾದ್ ತಡ ಮಾಡಲಿಲ್ಲ. ಕೂಡ್ಲೇ ಸೌಮ್ಯ ಶೆಟ್ಟಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ರು.
ತನಿಖೆ ನಡೆಸಿದ ಪೊಲೀಸರಿಗೆ ಸೌಮ್ಯಶೆಟ್ಟಿಯೇ ಕಳ್ಳಿ ಎಂದು ಗೊತ್ತಾಯ್ತು. ಪಕ್ಕಾ ಪ್ಲಾನ್ ಮಾಡಿ ಒಂದು ಕೆಜಿ ಚಿನ್ನಾಭರಣ ಕದ್ದಿದ್ದ ಸೌಮ್ಯ ಶೆಟ್ಟಿ ಮೊದಲೇ ಮಾಡಿಕೊಂಡ ಯೋಜನೆ ಪ್ರಕಾರ ಗೋವಾಗೆ ದಿ ಟ್ರಿಪ್ (The trip) ಹೋಗಿದ್ಲು.. ಇದೀಗ ಹೀರೋಯಿನ್ ಸೌಮ್ಯ ಶೆಟ್ಟಿ ಬಂಧಿಸಿರುವ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಅಂದ ಹಾಗೇ, ಯುವರ್ಸ್ ಲವಿಂಗ್ಲಿ, ದಿ ಟ್ರಿಪ್ ಹೆಸರಿನ ಎರಡು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಸೌಮ್ಯಶೆಟ್ಟಿ ನಟಿಸಿದ್ದಾರೆ.