ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈಗ ದರ್ಶನ್ ಪ್ರಕರಣದ ಬಗ್ಗೆ ತಾರಕ್ ನಟಿ ಶಾನ್ವಿ ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು ಎಂದು ನಟಿ ಮಾತನಾಡಿದ್ದಾರೆ
ಅವರ ಜೊತೆ ‘ತಾರಕ್’ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಚೆನ್ನಾಗಿತ್ತು. ಅಷ್ಟು ದೊಡ್ಡ ಸ್ಟಾರ್ ಅವರ ಜೊತೆ ನಟಿಸಿದ್ದು, ಖುಷಿಯಿದೆ. ನನಗೆ ತುಂಬಾ ಗೌರವ ಕೊಡ್ತಾ ಇದ್ದರು. ಅದು ಬಿಟ್ಟು ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ದರ್ಶನ್ ಈ ಘಟನೆ ಕೇಳಿ ಶಾಕ್ ಆಯ್ತು. ಈ ಪ್ರಕರಣದ ಕುರಿತು ನಾನು ಕಾಮೆಂಟ್ ಮಾಡೋದು ಸರಿಯಲ್ಲ. ನನಗೆ ಸಂಬಂಧಿಸಿಲ್ಲದ ಪ್ರಕರಣದ ಮಾತನಾಡಲ್ಲ ಎಂದು ನಟಿ ಮಾತನಾಡಿದ್ದಾರೆ.
ನಾನು ಸೋಶಿಯಲ್ ಮೀಡಿಯಾ ಯೂಸ್ ಮಾಡೋವಾಗ ಕೆಟ್ಟ ಕಾಮೆಂಟ್ ಒಳ್ಳೆಯ ಕಾಮೆಂಟ್ ಬರುತ್ತದೆ. ಆದರೆ ಒಳ್ಳೆಯ ಕಾಮೆಂಟ್ ಜಾಸ್ತಿ ಇರುತ್ತಲ್ಲ ಅದರ ಬಗ್ಗೆ ಗಮನ ಕೊಡ್ತೀನಿ. ಕೆಟ್ಟ ಕಾಮೆಂಟ್‌ಗಳಿಗೆ ಜಾಸ್ತಿ ತಲೆ ಕೆಡಿಸಿಕೊಂಡರೆ ಸಮಯ ವ್ಯರ್ಥವಾಗುತ್ತದೆ. ದರ್ಶನ್ ಅವರು ಆದಷ್ಟು ಬೇಗ ಈ ಪ್ರಕರಣದಿಂದ ಹೊರ ಬರಲಿ ಅಂತ ಆಶಿಸುತ್ತೇನೆ ಎಂದು ಶಾನ್ವಿ ಮಾತನಾಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com