ಅನಾರೋಗ್ಯ ಕಾರಣ ಕೆಲ ದಿನಗಳಿಂದ ಕೆಮರಾ ಮುಂದೆ ಬಾರದ ನಟಿ ಸಮಂತಾ (Samantha) ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆಕ್ಟೀವ್ ಆಗಿದ್ದಾರೆ.. ಪೋಡ್ಕಾಸ್ಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಶೀಘ್ರವೇ ಸಿನಿಮಾಗಳಲ್ಲಿ ನಟಿಸುವ ಸ್ವೀಟ್ ನ್ಯೂಸ್ ಕೂಡ ನೀಡಿದ್ದಾರೆ.
ಸದ್ಯ ಮಲೇಶಿಯಾ ಪ್ರವಾಸದಲ್ಲಿರುವ ಸಮಂತಾ ನೀರಿನ ಕೊಳಕ್ಕೆ ಬಿಕಿನಿ (Bikini)ಯಲ್ಲಿ ಇಳಿದಿದ್ದಾರೆ.. ತಾವು ಬಿಕಿನಿಯಲ್ಲಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಬಿಕಿನಿಯಲ್ಲಿ ಸಖತ್ ಹಾಟ್ ಆಗಿರುವ ಸಮಂತಾ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ ಎಂದರೇ ನಂಬಿ.10 ಮಿಲಿಯನ್ಗೂ ಹೆಚ್ಚು ವೀವ್ಸ್ ಬಂದಿವೆ. 25 ಲಕ್ಷದಷ್ಟು ಲೈಕ್ಸ್.. ಲೆಕ್ಕ ಇಲ್ಲದಷ್ಟು ಕಾಮೆಂಟ್ಗಳು ಬಂದಿರೋದೇ ಸಮಂತಾ ಬಿಕಿನಿ ಫೋಟೋ ಎಷ್ಟು ಕಿಚ್ಚು ಹಚ್ಚಿದೆ ಎಂಬುದಕ್ಕೆ ಸಾಕ್ಷಿ.

ಸಮಂತಾ ಬಾಡಿ ಫಿಟ್ನೆಸ್ಗೆ ಹೆಚ್ಚು ಆದ್ಯತೆ ಕೊಡ್ತಾರೆ.. ನಿತ್ಯ ಚಾಚೂತಪ್ಪದೇ ವ್ಯಾಯಾಮ-ಧ್ಯಾನ ಮಾಡ್ತಾರೆ. ಪದ್ದತಿ ಪ್ರಕಾರ ಡಯೆಟ್ ಮಾಡ್ತಾರೆ. ಅದಕ್ಕಾಗಿಯೇ ಸಮಂತಾ ಅಷ್ಟು ಫಿಟ್ ಆಗಿದ್ದಾರೆ.

ಯಾರಿಗಾದರೂ ವಯಸ್ಸು ಹೆಚ್ಚಾಗುತ್ತೆ.. ಆದರೆ, ಸಮಂತಾ ವಿಷಯದಲ್ಲಿ ಮಾತ್ರ ಉಲ್ಟಾ.. ಹೇಗೆ ಅಂತೀರಾ? ಮೆಟಾಬಾಲಿಕ್ ಪ್ರಕಾರ ಸದ್ಯ ಸಮಂತಾ ವಯಸ್ಸು ಕೇವಲ 23 ಮಾತ್ರ. ಸಮಂತಾ ದೇಹತೂಕ 50 ಕೆಜಿ ಮಾತ್ರ ಇದೆ ಎಂದಿರುವ ಒಂದು ಸ್ಲಿಪ್ ಅನ್ನು ಸಮಂತಾ ಪೋಸ್ಟ್ ಮಾಡಿದ್ದಾರೆ.

ಮಯೋಸೈಟೀಸ್ ಒಂದು ಬಾಧಿಸದಿದ್ದರೇ ಆಕೆ ಇನ್ನಷ್ಟು ಫಿಟ್ ಆಗಿ ಇರ್ತಿದ್ರು ಎಂಬುದು ದಿಟ. ಒಟ್ನಲ್ಲಿ ಸಮಂತಾ ಫೋಟೋಗಳು ಅವರ ಅಭಿಮಾನಿಗಳಿಗೆ ರಸದೌತಣ


