Top News
ನಟಿ ರನ್ಯಾ ರಾವ್ ಪ್ರಕರಣ; ರನ್ಯಾ ಮನೆ ಸೇರಿ ಹಲವೆಡೆ ED ದಾಳಿ

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗ್ತಿದೆ. ಪ್ರಕರಣದಲ್ಲಿ ಸಚಿವರು ಭಾಗಿಯಾಗಿದ್ದಾರೆಂದು ತಿಳಿದುಬಂದಿತ್ತು. ಅಲ್ಲದೇ ಸ್ವಾಮೀಜಿಯೊಬ್ಬರು ಸಹ ಈ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಹಿನ್ನಲೆ ಇದೀಗ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಇ.ಡಿ. ಎಂಟ್ರಿ ಕೊಟ್ಟಿದ್ದು ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇ.ಡಿ.ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಪ್ರಕರಣದಲ್ಲಿ ಇಸಿಆರ್ ದಾಖಲಿಸಿಕೊಂಡಿರುವ ಇ.ಡಿ. ಗೋಲ್ಡ್ ಅಕ್ರಮ ಸಾಗಾಣಿಕೆ ಆಗಿರುವ ಆಯಾಮದಲ್ಲಿ ತನಿಖೆ ಆರಂಭಿಸಿದೆ.
ಇಡಿ ನಟಿ ರನ್ಯಾ ರಾವ್ ಮನೆ, ಉದ್ಯಮಿ ತರುಣ್ ರಾಜ್, ಆರ್ಟಿ ನಗರದಲ್ಲಿ ಜ್ಯೋತಿಷ್ಯ ಕೇಂದ್ರ ನಡೆಸುತ್ತಿರುವ ಸ್ವಾಮೀಜಿ ಮತ್ತು ಕೆಲ ಪೊಲೀಸ್ ಅಧಿಕಾರಿಗಳಲ್ಲಿ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.




