Top Newsರಾಜ್ಯವೈರಲ್ ನ್ಯೂಸ್ಸಿನಿಮಾಸುದ್ದಿ

ರಕ್ಷಿತಾ ಪ್ರೇಮ್​ ಪ್ರೀತಿಯ ಸಹೋದರನ ಎಂಗೇಜ್ಮೆಂಟ್

ಬೆಂಗಳೂರು: ಏಕ್ ಲವ್ ಯಾ ಮೂವಿ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪರಿಚಿತರಾಗಿದ್ದ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ರಾಣಾ (ಅಭಿಷೇಕ್) ಅವರು ಸಿಂಪಲ್ ಆಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಈ ಸಂಬಂಧದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನು ಇದರಲ್ಲಿ ರಾಣಾ ಹಾಗೂ ಅವರು ಭಾವಿ ಪತ್ನಿ ಇದ್ದಾರೆ. ರಕ್ಷಿತ್ ಪ್ರೇಮ್ ಕೂಡ ಸ್ಮೈಲ್ ಕೊಡುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದರೆ ಜೋಗಿ ಪ್ರೇಮ್ ಕಾಣಿಸಿಕೊಂಡಿಲ್ಲ.

ಇನ್ನುಳಿದಂತೆ ಅವರ ಮನೆಯವರು, ಸ್ನೇಹಿತರು ಇದ್ದಾರೆ. ರಾಣಾ ಅವರ ಫೋಟೋ ವೈರಲ್ ಆಗಿದ್ದು ಜೋಡಿ ಸೂಪರ್ ಆಗಿದೆ. ನಿಮಗೆ ಶುಭವಾಗಲಿ. ಹೀಗೆ ಖುಷಿ ಖುಷಿಯಾಗಿರಿ ಎಂದು ನೆಟ್ಟಿಗರು ಶುಭಾ ಹಾರೈಸುತ್ತಿದ್ದಾರೆ.

ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ (ಅಭಿಷೇಕ್) ಹೆಸರಿನಲ್ಲಿ ಕನ್ನಡ ಚಿತ್ರರಂಗದ ಮೂಲಕ ತನ್ನ ಸಿನಿ ಕೆರಿಯರ್ ಪ್ರಾರಂಭಿಸಿದ್ದರು. ಮೊದಲ ಸಿನಿಮಾದಲ್ಲಿ ಸಕ್ಸಸ್ ಕಂಡಿದ್ದರು. ಏಕ್ ಲವ್ ಯಾ ಸಿನಿಮಾವನ್ನು ಇವರ ಮಾವ, ಸ್ಟಾರ್ ಡೈರೆಕ್ಟರ್ ಪ್ರೇಮ್ ಅವರು ನಿರ್ದೇಶನ ಮಾಡಿದ್ದರು. ಸುದೀಪ್ ಸೇರಿ ಇತರೆ ನಟರು, ರಾಣಾ ಅವರನ್ನು ಕನ್ನಡ ಸಿನಿಮಾರಂಗಕ್ಕೆ ಸ್ವಾಗತಿಸಿದ್ದರು.

Comments (0)

Your email address will not be published. Required fields are marked *

Back to top button