Top Newsಸಿನಿಮಾ

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪರಿಣಿತಿ ಚೋಪ್ರಾ

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್‌ ಚಡ್ಡಾ ಸಾಮಾಜಿಕ ಮಾಧ್ಯಮದಲ್ಲಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ನಟಿ ಪರಿಣಿತಿ ಚೋಪ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ಸ್‌ಸ್ಟಾಗ್ರಾಂನಲ್ಲಿ ಅಧಿಕೃತವಾಗಿ ತಾಯಿ ಆಗಲಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ..

ನಮ್ಮ ಪುಟ್ಟ ಜಗತ್ತು ಶೀಘ್ರದಲ್ಲೇ ನಮ್ಮ ಜೀವನದಲ್ಲಿ ಬರುತ್ತಿದೆ ಎಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ವಿಭಿನ್ನವಾಗಿ ಹೇಳಿದ್ದಾರೆ. 1+ 1 = 3 ಎಂಬ ಬರಹದಲ್ಲಿ ಪುಟ್ಟ ಪಾದಗಳ ಚಿತ್ರ ತೋರಿಸಿದ್ದಾರೆ. ನಮ್ಮ ಪುಟ್ಟ ಜಗತ್ತು ಬರುತ್ತಿದೆ ಎಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ವಿಭಿನ್ನವಾಗಿ ನೀಡಿದ್ದಾರೆ.

ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾರನ್ನು ನಟಿ ಪರಿಣಿತಿ ಚೋಪ್ರಾ 2023ರಲ್ಲಿ ವಿವಾಹವಾಗಿದ್ದರು. ಬಳಿಕ ಸಿನಿಮಾ ನಟನೆಯಿಂದ ಪರಿಣಿತಿ ದೂರವೇ ಉಳಿದಿದ್ದರು. ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಅಧಿಕೃತವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇನ್ನು ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಫ್, ಸೋನಂ ಕಪೂರ್, ಸೇರಿದಂತೆ ಹಲವರು ಇನ್ಸ್‌ಸ್ಟಾಗ್ರಾಂನಲ್ಲಿನಲ್ಲೇ ಶುಭಾಶಯ ಕೋರಿದ್ದಾರೆ.

Comments (0)

Your email address will not be published. Required fields are marked *

Back to top button