ಜಂಟಲ್ ಮನ್ ಗುರು ಶಿಷ್ಯರು ಚಿತ್ರಗಳಲ್ಲಿನ ನಟನೆಗೆ ಹೆಸರುವಾಸಿಯಾದ ನಟಿ ನಿಶ್ವಿಕಾ ನಾಯ್ಡು ಅವರು ಸ್ನೇಹಿತರ ಜೊತೆಗೆ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ನಿಶ್ವಿಕಾ ಅವರು ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪ್ರವೇಶಿಸಿದರು. ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕಾಣೆಸಿಕೊಂಡಿರುವ ನಿಶ್ವಿಕಾ ರಿಯಾಲಿಟಿ ಶೋನಲ್ಲಿ ತೀರ್ಪುಗಾರ್ತಿಯಾಗಿ ಗಮನ ಸೆಳೆದಿದ್ದಾರೆ.
ನಟ ಪ್ರಭುದೇವ ಮತ್ತು ಶಿವರಾಜ್ ಕುಮಾರ್ ನಟನೆಯ ಕರಟಕ ದಮನಕ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣೆಸಿಕೊಂಡರು. ಯೋಗ,ಫಿಟ್ ನೆಸ್ ಅಂತ ಜೆಮ್ ನಲ್ಲಿ ಕಾಲ ಕಳೆಯುತ್ತಿದ್ದ ನಿಶ್ವಿಕಾ ನಾಯ್ಡು ಈಗ ಹೊಸ ಸಾಹಸಕ್ಕೆ ದುಮುಕಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನಿಶ್ವಿಕಾ ನಾಯ್ಡು ಸ್ಕೂಬಾ ಡೈವಿಂಗ್ ಮಾಡಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.ಅದರ ಜೊತೆಗೆ ನನ್ನ ಶಕ್ತಿಶಾಲಿ ಹುಡುಗಿಯರ ಜೊತೆ ನೀರಿನ ಆಳದಲ್ಲಿ ಮೋಜೋ ಜೋಜೋ ಹುಡುಕಲು ಹೋಗಿದ್ದೆ ಎಂದು ಬರೆದುಕೊಂಡಿದ್ದಾರೆ. ಸಮ್ರುದದ ಆಳಕ್ಕೆ ಇಳಿದು ಜಲಚರ ಪ್ರಾಣೆಗಳನ್ನು ಹತ್ತಿರದಿಂದ ನೋಡಿ ಖುಷಿಪಟ್ಟದ್ದಾರೆ.


