
ಬೆಂಗಳೂರು: ಹಿರಿಯ ನಟಿ ಲೀಲಾವತಿ ಪುತ್ರ, ನಟ ವಿನೋದ್ ರಾಜ್ ತಾಯಿ ಅಗಲಿಕೆ ನಂತರ ಏಕಾಂಗಿಯಾಗಿ ವಾಸವಿದ್ದರು. ಇದೀಗ ವಿನೋದ್ ರಾಜ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
ನಟ ವಿನೋದ್ ರಾಜ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನೆಲಮಂಗಲದಲ್ಲಿರುವ ಇರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ವಿನೋದ್ ರಾಜ್ ಅವರಿಗೆ ಸದ್ಯ ಆಪರೇಷನ್ ಮಾಡಲಾಗಿದೆ ಎಂದು ಮೂಲಗಳ ಮಾಹಿತಿ ಪ್ರಕಾರ ತಿಳಿದುಬಂದಿದೆ.
ವಿನೋದ್ ರಾಜ್ ಅವರಿಗೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ನಟನ ಆರೋಗ್ಯದ ಬಗ್ಗೆ ಇನ್ನುಷ್ಟು ಮಾಹಿತಿ ವೈದ್ಯರಿಂದ ತಿಳಿದು ಬರಬೇಕಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




