Tuesday, January 27, 2026
24 C
Bengaluru
Google search engine
LIVE
ಮನೆವೈರಲ್ ನ್ಯೂಸ್ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ: ಸಿದ್ಧಾಂತ್ ಚತುರ್ವೇದಿ

ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ: ಸಿದ್ಧಾಂತ್ ಚತುರ್ವೇದಿ

ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ (Siddant Chaturvedi) ಸದ್ಯ ಕರಣ್ ಜೋಹರ್ ನಿರ್ಮಾಣದ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ (Deepika Padukone) ಜೊತೆ ಇಂಟಿಮೇಟ್ ದೃಶ್ಯ ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ ಎಂದು ಮಾತನಾಡಿದ್ದಾರೆ.  ಭಾರತದ ಅನೇಕರು ಸಿಕ್ಕ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಮಾತ್ರವಲ್ಲ ಇಂತಹ ದೃಶ್ಯಗಳನ್ನು ನಿಭಾಯಿಸುವಾಗ ತಂದೆಯ ಸಹಕಾರ ಕೂಡ ನನಗಿತ್ತು. ‌’ಗೆಹ್ರೈಯಾನ್’ (Gehraiyaan) ಚಿತ್ರದಲ್ಲಿ ದೀಪಿಕಾ ಜೊತೆ ಹಸಿ ಬಿಸಿ ದೃಶದಲ್ಲಿ ನಟಿಸುವಾಗ ತುಂಬಾ ನರ್ವಸ್ ಆಗಿದ್ದೆ. ಕರಣ್ ಜೋಹರ್ ಅವರ ಬಳಿ ಕೂಡ ನನ್ನ ಕಳವಳ ವ್ಯಕ್ತಪಡಿಸಿದ್ದೆ. ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನನಗೆ ಪ್ರೋತ್ಸಾಹಿಸಿದರು ಎಂದು ನಟ ಸಿದ್ಧಾಂತ್ ಮಾತನಾಡಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಶಕುನ್ ಬಾತ್ರಾ ಜೊತೆ ಕೆಲಸ ಮಾಡುವ ಒಳ್ಳೆಯ ಅವಕಾಶ ನನ್ನದಾಗಿತ್ತು ಎಂದು ಹೇಳಿದ್ದಾರೆ.

ಇನ್ನೂ ದೀಪಿಕಾ ಪಡುಕೋಣೆ (Deepika Padukone) ಸ್ವೀಟ್ ವ್ಯಕ್ತಿಯಾಗಿದ್ದರು. ಈ ಸಿನಿಮಾ ಮಾಡುವಾಗ ಬೆಂಬಲಿಸಿದ್ದರು. ಆ ಬಾಂಧವ್ಯದಿಂದಲೇ ನಾವು ಉತ್ತಮ ಸ್ನೇಹಿತರಾದೆವು ಎಂದು ಸಿದ್ಧಾಂತ್ ಚರ್ತುರ್ವೇದಿ ಮಾತನಾಡಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments