ಹಾಸ್ಯ ನಟ ಸಂಜು ಬಸಯ್ಯ ಹಾಗೂ ಅವರ ಪತ್ನಿ ಪಲ್ಲವಿ ಪದೇ ಪದೇ ಸುದ್ದಿಯಲ್ಲಿರ್ತಾರೆ. ಸಂಜು ಬಸಯ್ಯ ಹಾಗೂ ಅವರ ಪತ್ನಿಯನ್ನ ಹಲವರು ರೇಗಿಸಿ ಅಪಹಾಸ್ಯ ಮಾಡಿದ್ದೂ ಇದೆ. ಆದ್ರೆ ಅದ್ಯಾವುದೂ ಸಂಜು ಹಾಗೂ ಬಸಯ್ಯ ದಾಂಪತ್ಯಕ್ಕೆ ಅಡ್ಡಿ ಆಗಿಲ್ಲ.. ಇಬ್ರೂ ಪ್ರೀತಿಸಿ ಮದುವೆಯಾಗಿದ್ದು, ಅವರ ನಡುವಿನ ಅನ್ಯೋನ್ಯತೆಗೆ ಬೇರೆಯವರ ಮಾತುಗಳು ಯಾವತ್ತೂ ಅಡ್ಡಿ ಆಗಿಲ್ಲ. ಇದೀಗ ಸಂಜು ಬಸಯ್ಯ ಪತ್ನಿ ಪಲ್ಲವಿಗಿ ಕಿಡಿಗೇಡಿಯೊಬ್ಬ ಅಶ್ಲೀಲ ಮೆಸೇಜ್ಗಳನ್ನ ಕಳಿಸಿದ್ದು, ಇದನ್ನ ನೋಡಿ ಸಂಜು ಬಸಯ್ಯ ಮಾಡಿದ ಕೆಲಸ ಮಾತ್ರ ಎಲ್ಲರನ್ನೂ ಮೆಚ್ಚಿಸುವಂತಿದೆ.
ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿಯನ್ನ ಕರೆಸಿ ಶೆಡ್ನಲ್ಲಿ ಹಾಕಿ ಥಳಿಸಿ ಕೊಂದಿದ್ದರು. ಈ ಸಂಬಂಧ ದರ್ಶನ್ ಜೈಲಯವಾಸವನ್ನೂ ಅನುಭವಿಸಿ ಬೇಲ್ ಮೇಲೆ ಹೊರಗಿದ್ದಾರೆ. ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸಿದ ಅನ್ನೋ ಕಾರಣಕ್ಕೆ ಅವನನ್ನು ಕಿಡ್ನಾಪ್ ಮಾಡಿಸಿ ಕರೆತಂದು ಅಮಾನುಷವಾಗಿ ಥಳಿಸಿ ಕೊಲೆ ಮಾಡಲಾಗಿತ್ತು..
ಇದೇ ರೀತಿ ಸಂಜು ಬಸಯ್ಯಗೂ ಆಗಿದೆ. ಸಂಜು ಬಸಯ್ಯ ಪತ್ನಿ ಪಲ್ಲವಿಗೆ ವಿಜಯನಗರ ಮೂಲದ ಮನೋಜ್ ಎಂಬ ಪಿಯುಸಿ ವಿದ್ಯಾರ್ಥಿಯೊಬ್ಬ ಇನ್ಸ್ಟಾಗ್ರಾಂ ಮೂಲಕ ಅಶ್ಲೀಲ ಮೆಸೇಜ್ಗಳನ್ನ, ಅಶ್ಲೀಲ ಫೋಟೋಗಳನ್ನ ಕಳಿಸಿದ್ದ. ಆದರೆ ಸಂಯಮ ಕಳೆದುಕೊಳ್ಳದ ಸಂಜು ಬಸಯ್ಯ ಬೈಲಹೊಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಆರೋಪಿ ಮನೋಜ್ನನ್ನು ಹುಡುಕಿ ಠಾಣೆಗೆ ಎಳೆದುಕರೆತಂದಿದ್ದರು. ಈ ವೇಳೆ ಸಂಜು ಬಸಯ್ಯ ಮಾತ್ರ ವಿದ್ಯಾರ್ಥಿ ಮನೋಜ್ ಭವಿಷ್ಯ ಹಾಳಾಗಬಾರದೆಂದು ಬುದ್ಧಿ ಮಾತು ಹೇಳಿ ವಾಪಸ್ ಕಳಿಸಿದ್ದಾರೆ.. ದರ್ಶನ್ ಇದೇ ರೀತಿ ಮಾಡಲು ಹೋಗಿ ಕೊಲೆ ಮಾಡಿಬಿಟ್ಟಿದ್ರು. ಆದರೆ ಸಂಜು ಬಸಯ್ಯ ತಪ್ಪು ಮಾಡಿದ ಹುಡುಗನಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ.
ಆದರೆ ಸಂಜು ಬಸಯ್ಯನ ಕ್ರಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಆಗುತ್ತಿದೆ.. ಡಿ ಬಾಸ್ ದರ್ಶನ್ ತನ್ನ ಗೆಳತಿಗಾದ ಅವಮಾನವನ್ನ ಸಹಿಸಲಿಲ್ಲ, ಅವರು ಸೇಡು ತೀರಿಸಿಕೊಂಡ್ರು, ಆದರೆ ಸಂಜು ಬಸಯ್ಯನ ಕೈನಲ್ಲಿ ಏನೂ ಆಗಲ್ಲ, ಕೇವಲ ಬುದ್ಧಿ ಮಾತು ಹೇಳಿ ಕಳಿಸಿದ್ದಾರೆ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.


