ಸಿನಿಮಾಸುದ್ದಿ

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಕೊಡ್ತಾರೆ ‘ಕ್ರೇಜಿ ಸ್ಟಾರ್’ ರವಿಚಂದ್ರನ್

ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್‌ಗಳನ್ನು ನೀಡಲಿದೆ. ಹೌದು, ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಡಬಲ್ ಸರ್ಪ್ರೈಸ್‌ ನೀಡಲು ಸಜ್ಜಾಗಿದ್ದಾರೆ. ಏನದು ಸರ್ಪ್ರೈಸ್‌?

ಎರಡು ಸಿನಿಮಾ ಅನೌನ್ಸ್ ಮಾಡ್ತಾರೆ ರವಿಮಾಮಾ?

ಮೇ 30ರ ತಮ್ಮ ಹುಟ್ಟುಹಬ್ಬದ ದಿನ ರವಿಚಂದ್ರನ್ ಅವರು ಹೊಸ ಅನೌನ್ಸ್‌ಮೆಂಟ್‌ಗಳನ್ನು ಮಾಡಲಿದ್ದಾರೆ ಎಂಬ ಟಾಕ್ ಮುಂಚೆಯೇ ಕೇಳಿಬಂದಿತ್ತು. ಅದಕ್ಕೀಗ ಕ್ಷಣಗಣನೆ ಆರಂಭವಾಗಿದೆ. ಹೌದು, ರವಿಚಂದ್ರನ್ ಭಾರಿ ನಿರೀಕ್ಷೆಯಿಂದ ಆರಂಭಿಸುತ್ತಿರುವ ‘ಪ್ರೇಮಲೋಕ 2’ ಸಿನಿಮಾದ ಬಗ್ಗೆ ಇಂದೇ ಅಧಿಕೃತ ಘೋಷಣೆ ಆಗಲಿದೆ. ‘ಪ್ರೇಮಲೋಕ 2’ ಚಿತ್ರವನ್ನು ರವಿಚಂದ್ರನ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ಅವರ ಪುತ್ರ ಮನೋರಂಜನ್ ಇದರ ಹೀರೋ ಎಂಬುದು ವಿಶೇಷ.

ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಕೂಡ ರವಿಚಂದ್ರನ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ಕೂಡ ಅವರೇ ನಿರ್ದೇಶನ ಮಾಡಲಿದ್ದು, ನಟನೆಯನ್ನೂ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾ ಯಾವುದು? ಇದರ ಶೀರ್ಷಿಕೆ ಏನು ಎಂಬುದು ಇನ್ನೂ ಗೌಪ್ಯವಾಗಿ ಇಡಲಾಗಿದೆ. ಅದಕ್ಕುತ್ತರ ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಪುನಃ ನಿರ್ದೇಶನಕ್ಕೆ ಮರಳಿದ ರವಿಚಂದ್ರನ್

ರವಿಚಂದ್ರನ್ ಅವರು ‘ರವಿ ಬೋಪಣ್ಣ’ ಸಿನಿಮಾ ನಂತರ ನಿರ್ದೇಶನದಿಂದ ದೂರ ಉಳಿದಿದ್ದರು. ‘ರವಿ ಬೋಪಣ್ಣ’ ಸಿನಿಮಾವು ಅಂದುಕೊಂಡಮಟ್ಟಕ್ಕೆ ಯಶಸ್ಸು ಪಡೆದಿರಲಿಲ್ಲ. ಆದರೆ ಈ ಬಾರಿ ಹೊಸ ಚೈತನ್ಯದೊಂದಿಗೆ ಪುಟಿದೆದ್ದಿರುವ ರವಿಚಂದ್ರನ್, ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿ ಇದ್ದಾರೆ.

‘ಪ್ರೇಮಲೋಕ 2’ ಸಿನಿಮಾದಲ್ಲಿ ರವಿ ಫ್ಯಾಮಿಲಿ

1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾವು ರವಿಚಂದ್ರನ್ ಅವರ ಕರಿಯರ್‌ಗೆ ಎಷ್ಟು ಮಹತ್ವದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ಅದರ ಪಾರ್ಟ್ 2 ಮಾಡುವುದಕ್ಕೆ ರವಿಚಂದ್ರನ್ ಹೊರಟಿದ್ದು, ಪುತ್ರ ಮನೋರಂಜನ್ ಅವರಿಗೆ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಿರ್ದೇಶನ ಮಾಡಲಿದ್ದಾರೆ. ‘ಪ್ರೇಮಲೋಕ 2’ ಸಿನಿಮಾದಲ್ಲಿ ರವಿಚಂದ್ರನ್ ಕೂಡ ಒಂದು ಮುಖ್ಯ ಪಾತ್ರ ಮಾಡಲಿದ್ದಾರಂತೆ. ಜೊತೆಗೆ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್ ಕೂಡ ಒಂದು ಪಾತ್ರವನ್ನು ‘ಪ್ರೇಮಲೋಕ 2’ ಚಿತ್ರದಲ್ಲಿ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಚಿತ್ರದಲ್ಲಿ 25 ಹಾಡುಗಳು ಇರಲಿವೆ ಎಂದು ಹಿಂದೊಮ್ಮೆ ರವಿಚಂದ್ರನ್ ಹೇಳಿದ್ದರು.

‘ದಿ ಜಡ್ಜ್‌ಮೆಂಟ್’ ರಿಲೀಸ್

ಕಳೆದ ವಾರವಷ್ಟೇ (ಮೇ 24) ರವಿಚಂದ್ರನ್ ನಟನೆಯ ‘ದಿ ಜಡ್ಜ್‌ಮೆಂಟ್’ ಸಿನಿಮಾ ಬಿಡುಗಡೆ ಆಗಿದೆ. ಇದರಲ್ಲಿ ವಕೀಲರಾಗಿ ರವಿಚಂದ್ರನ್ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು, ‘ಜೋಗಿ’ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ‘ಕೆಡಿ’ ಚಿತ್ರದಲ್ಲೂ ರವಿಚಂದ್ರನ್ ಒಂದು ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಜೊತೆಗೆ ಇನ್ನೊಂದಿಷ್ಟು ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button