ಧಾರವಾಡ: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಜನ್ಮ ದಿನವನ್ನು ಧಾರವಾಡದಲ್ಲಿ ಅವರ ಅಭಿಮಾನಿಗಳು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಅನ್ನ ಸಂತರ್ಪಣೆ ಮಾಡುವ ಮೂಲಕ ಮಾದರಿಯ ಕಾರ್ಯ ಮಾಡಿ ಅಭಿಮಾನ ಮೇರೆದೀದ್ದಾರೆ.
ಧಾರವಾಡದ ಮಾಳಮಡ್ಡಿಯ ಆಟೊ ಸ್ಟ್ಯಾಂಡ್ ಬಳಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನಿಗಳು, ನಂತರ ಪಟಾಕಿ ಸಿಡಿಸಿ ಆಟೊ ಸಂಘದ ಪದಾಧಿಕಾರಿಗಳು ಹಸಿದವರಿಗೆ ಅನ್ನ ನೀಡುವ ಮೂಲಕ ದಿವಂಗತ ಪುನೀತ ರಾಜಕುಮಾರವರ ಅರ್ಥಪೂರ್ಣ ಹುಟ್ಟು ಹಬ್ಬ ಆಚರಣೆ ಮಾಡಿದರು. ಪುನೀತ್ ರಾಜಕುಮಾರ ಅವರ ಅಭಿಮಾನಿಗಳು, ಆಟೊ ಸಂಘದ ಸದಸ್ಯರ ಜೊತೆ ಜಯ ಕರ್ನಾಟಕ ಸಂಘಟನೆಯವರೂ ಪುನೀತ್ ರಾಜಕುಮಾರ್ ಅವರ ಜನ್ಮ ದಿನೋತ್ಸವದಲ್ಲಿ ಪಾಲ್ಗೊಂಡರು. ಜಯ ಕರ್ನಾಟಕ ಸಂಘಟನೆಯವರು ಆಟೋ ಸಂಘದ ಸದಸ್ಯರಿಗೆ ಉಚಿತವಾಗಿ ಆಟೋ ಬಾಗಿಲುಗಳನ್ನು ಇದೇ ವೇಳೆ ನೀಡಿದ್ದು, ಒಟ್ಟಾರೆ ಪುನೀತ್ ರಾಜಕುಮಾರ್ ಅವರ ಜನ್ಮ ದಿನವನ್ನು ಜಯಕರ್ನಾಟಕ ಸಂಘಟನೆಯವರು, ಪುನೀತ್ ಅವರ ಅಭಿಮಾನಿಗಳು ಹಾಗೂ ಆಟೋ ಸಂಘದ ಸದಸ್ಯರು ಅರ್ಥಪೂರ್ಣವಾಗಿ ಆಚರಿಸಿದರು