‘ರಾನಿ’ ಸಿನಿಮಾ ರಿಲೀಸ್ ಬ್ಯುಸಿಯಾಗಿದ್ದ ಕನ್ನಡ ನಟ ಕಿರಣ್ ರಾಜ್ ಅವರ ಕಾರ್ ಅಪಘಾತ ( ಸೆಪ್ಟೆಂಬರ್ 10 ) ಆಗಿದೆ. ಕೆಂಗೇರಿ ಬಳಿ ಕಾರ್ ಅಪಘಾತ ಆಗಿದ್ದು, ಕಾರ್ ಮುಂಭಾಗ ನುಜ್ಜುಗುಜ್ಜಾಗಿದೆ. ಕಿರಣ್ ಅವರ ಎದೆಯ ಭಾಗಕ್ಕೆ ಹೊಡೆತ ಬಿದ್ದಿದೆ. ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದ ಕಿರಣ್ ರಾಜ್
ಸೆಪ್ಟೆಂಬರ್ 10ರಂದು ಮಧ್ಯಾಹ್ನ ಕಿರಣ್ ರಾಜ್ ಅವರ ‘ರಾನಿ’ ಸಿನಿಮಾದ ಪ್ರದರ್ಶನ ಇತ್ತು. ಅದರಲ್ಲಿ ಭಾಗಿಯಾಗಿದ್ದ ಕಿರಣ್ ರಾಜ್ ಅವರು ರಾತ್ರಿ ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿದ್ದರು. ಸಾಮಾಜಿಕ ಕೆಲಸದಲ್ಲಿಯೂ ಪಾಲ್ಗೊಳ್ಳುವ ಅವರು ವೃದ್ಧಾಶ್ರಮವೊಂದಕ್ಕೆ ಭೇಟಿ ನೀಡಿ, ಅಲ್ಲಿರುವವರ ಆಶೀರ್ವಾದ ಪಡೆದಿದ್ದಾರೆ. ಹಬ್ಬ ಬಂದಾಗ, ಸಮಯ ಸಿಕ್ಕಾಗ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರು ಆಹಾರ ವಿತರಣೆ ಮಾಡುತ್ತಾರೆ, ಸಮಯ ಕಳೆಯುತ್ತಾರೆ.ಕಿರಣ್ ರಾಜ್ ಅವರು ಈ ಬಾರಿ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟು, “ನನ್ನ ರಾನಿ ಸಿನಿಮಾ ರಿಲೀಸ್ ಆಗ್ತಿದೆ, ನೀವೆಲ್ಲರೂ ಅಶೀರ್ವಾದ ಮಾಡಬೇಕು” ಎಂದು ಹೇಳಿದ್ದಾರೆ. ಕಿರಣ್ ಮಾತು ಕೇಳಿ ಅಲ್ಲಿದ್ದವರೆಲ್ಲರೂ ಖುಷಿ ಪಟ್ಟಿದ್ದಾರೆ.
ಅಪಘಾತ ಆಗಿದ್ದು ಹೇಗೆ?
ಇದಾದ ನಂತರ ಅವರಿಗೆ ಅಪಘಾತ ಆಗಿದೆ. ಕಿರಣ್ ಅವರ ಎದೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಶೀಘ್ರವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಕಿರಣ್ ಅವರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.