Top Newsಸುದ್ದಿ

ಇಂದು ನಟ ದರ್ಶನ್, ಪವಿತ್ರಾ ಗೌಡ ಜಾಮೀನು ಭವಿಷ್ಯ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ 6 ಮಂದಿಯ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. 57ನೇ ಸಿಸಿಎಚ್ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ಮೂಡಿದೆ.

ಕೇಸಲ್ಲಿ ದರ್ಶನ್, ಮೊದನೇ ಆರೋಪಿ ಪವಿತ್ರಾಗೌಡ, 8ನೇ ಆರೋಪಿ ರವಿಶಂಕರ್, 11ನೇ ಆರೋಪಿ ನಾಗರಾಜ್, 12ನೇ ಲಕ್ಷ್ಮಣ್, 13 ಆರೋಪಿ ದೀಪಕ್ ಜಾಮೀ ನು ಅರ್ಜಿಯ ಆದೇಶ ಪ್ರಕಟಗೊಳ್ಳಲಿದೆ. ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಪ್ರಬಲ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್‌ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಗುರುವಾರವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.

ಒಂದು ವೇಳೆ ಜಾಮೀನು ಸಿಕ್ಕರೆ ದರ್ಶನ್ ಆ್ಯಂಡ್ ಗ್ಯಾಂಗ್‌ ಜೈಲಿನಿಂದ ಬಿಡುಗಡೆಯಾಗ ಲಿದೆ. ಆರೋಪಿ ದೀಪಕ್, ರವಿ ಶಂಕರ್‌ಗೆ ಜಾಮೀನು ನೀಡಲು ಎಸ್​​ಪಿಪಿ ತಕರಾರು ಎತ್ತಿಲ್ಲ. ಆದರೆ, ನಟ ದರ್ಶನ್, ಪವಿತ್ರಾಗೌಡ ಸೇರಿ ನಾಲ್ವರ ಜಾಮೀನಿಗೆ ಎಸ್‌ಪಿಪಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಟ ದರ್ಶನ್ ಜಾಮೀನು ಅರ್ಜಿ ಆದೇಶದ ಕುರಿತು ಕುತೂಹಲ ಮೂಡಿದೆ.

Comments (0)

Your email address will not be published. Required fields are marked *

Back to top button