ಮೈಸೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.

ಟಿ.ನರಸೀಪುರ ರಸ್ತೆಯಲ್ಲಿರುವ ಫಾರ್ಮೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಾಣಿಕೆ ಮಾಡಿದ್ದಕ್ಕೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ವಿರುದ್ದ ಟಿ.ನರಸೀಪುರ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಇಬ್ಬರಿಗೂ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಲಾಗಿದೆ.

ʼಬಾರ್ ಹೆಡೆಡ್ ಗೂಸ್ʼ ಎಂಬ 4 ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಸಾಕಿದ್ದ ದರ್ಶನ್ ಮತ್ತು ವಿಜಯಲಕ್ಷ್ಮಿಗೆ ವಿಚಾರಣೆಗೆ ಬರುವಂತೆ ನ್ಯಾಯಲಾಯ ನೋಟಿಸ್ನಲ್ಲಿ ತಿಳಿಸಿದೆ.


