ರಾಜ್ಯಸಿನಿಮಾ

ಜೊತೆ ಜೊತೆಯಲಿ ಭರತನಾಟ್ಯ ನೋಡಿದ್ರು ನಟ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹೊಸ ಚಿತ್ರ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿಮಾನಿಗಳ ಪ್ರೀತಿಯ ಡಿಬಾಸ್, ದಾಸ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗೆ ಭರತನಾಟ್ಯ ವೀಕ್ಷಿಸಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಅವರ ಜೊತೆ ನಟ ದರ್ಶನ್ ಅವರು ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ದರ್ಶನ್​ ನಟಿಸಿರುವ ಕ್ರಾಂತಿ ಸಿನಿಮಾದ ನಿರ್ಮಾಪಕರಾದ ಬಿ ಸುರೇಶ್​ ಮತ್ತು ಶೈಲಜಾ ನಾಗ್​ ದಂಪತಿಯ ಮಗಳು ಚಂದನ ಎಸ್​ ನಾಗ್​ ನಿನ್ನೆ ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ಬಿಡಿಎ ರಂಗಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭರತನಾಟ್ಯ ರಂಗಪ್ರವೇಶಕ್ಕೆ ಸಾಕ್ಷಿಯಾಗುವ ಮೂಲಕ ಚಂದನ ಎಸ್​ ನಾಗ್​ ಅವರಿಗೆ ನಟ ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀ ಶುಭಹಾರೈಸಿದರು. ಇನ್ನು ರಾಜಸ್ಥಾನದಲ್ಲಿ ನಟ ದರ್ಶನ್​ ಅವರ ಡೆವಿಲ್​ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೈದ್ರಾಬಾದ್​​ನಲ್ಲಿ ಚಿತ್ರದ ಮುಂದಿನ ಚಿತ್ರೀಕರಣ ನಡೆಯಲಿದೆ.

Comments (0)

Your email address will not be published. Required fields are marked *

Back to top button