ನಟ ಸರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರು ಹುಟ್ಟೂರಿನ ಅಹೋಬಲ ನರಸಿಂಹ ದೇವಸ್ಥಾನದ ರಥೋತ್ಸವದಲ್ಲಿ ಭಾಗಿಯಾಗಿ ತೇರು ಎಳೆದಿದ್ದಾರೆ.
ಇಂದು ತುಮಕೂರು ಜಿಲ್ಲೆಯ ಜಕ್ಕೇನಹಳ್ಳಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅರ್ಜುನ್ ಸರ್ಜಾ ಕುಟುಂಬಸ್ಥರಿ ಭಾಗಿಯಾಗಿದ್ದಾರೆ. ಮನೆ ದೇವರು ಅಹೋಬಲ ನರಸಿಂಹ ಸ್ವಾಮಿಯ ರಥ ಎಳೆದಿದ್ದಾರೆ.
ಈ ಸಂದರ್ಭದಲ್ಲಿ ನಟ ಅರ್ಜುನ ಸರ್ಜಾ ಹಾಗೂ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಫ್ಯಾನ್ಸ್ಗಳನ್ನು ಕಂಟ್ರೋಲ್ ಮಾಡಲು ಪೋಲಿಸರು ಹರಸಾಹಸ ಪಟ್ಟಿದ್ದಾರೆ.