‘ಬಿಗ್ ಬಾಸ್’ ರಿಯಾಲಿಟಿ ಶೋನ ಹೊಸ ಹೊಸ ಸೀಸನ್ ಶುರುವಾದಾಗೆಲ್ಲಾ, ಅದರಲ್ಲಿ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲಗಳು ಇದ್ದೇ ಇರುತ್ತವೆ. ಅದರ ಜೊತೆಗೆ ಶೋನ ಆ್ಯಂಕರ್ ಬಗ್ಗೆಯೂ ಚರ್ಚೆಗಳಾಗವುದನ್ನು ನಾವು ನೋಡಿದ್ದೇವೆ. ಸಾಮಾನ್ಯವಾಗಿ ‘ಬಿಗ್ ಬಾಸ್’ ರಿಯಾಲಿಟಿ ಶೋನ ನಿರೂಪಕರು ಬದಲಾಗುವುದು ತೀರಾ ಕಡಿಮೆ. ಆದರೆ ಅಂಥದ್ದೊಂದು ಬದಲಾವಣೆ ಆಗಿಯೇ ಬಿಟ್ಟಿದೆ. ಇದು ಆಗಿರುವುದು ‘ಬಿಗ್ ಬಾಸ್’ ಹಿಂದಿ ಓಟಿಟಿ ಸೀಸನ್ 3 ಶೋನಲ್ಲಿ ಎಂಬುದು ವಿಶೇಷ.
‘ಬಿಗ್ ಬಾಸ್’ ಅಂಗಳಕ್ಕೆ ಎಂಟ್ರಿ ನೀಡಿದ ಅನಿಲ್ ಕಪೂರ್
ಇದೀಗ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರು ಈ ಬಾರಿಯ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋವನ್ನು ನಡೆಸಿಕೊಡುವುದಕ್ಕೆ ಮುಂದಾಗಿದ್ದಾರೆ. ಅಂದಹಾಗೆ, ‘ಬಿಗ್ ಬಾಸ್’ ಹಿಂದಿ ಓಟಿಟಿ ಸೀಸನ್ 1 ಆರಂಭವಾದಾಗ, ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅದನ್ನು ನಡೆಸಿಕೊಟ್ಟಿದ್ದರು. ಅನಂತರ ಸೀಸನ್ 2ರನ್ನು ಸ್ವತಃ ಸಲ್ಮಾನ್ ಖಾನ್ ಅವರೇ ನಡೆಸಿಕೊಟ್ಟಿದ್ದರು. ಆದರೆ ಮೂರನೇ ಸೀಸನ್‌ಗೆ ಸಲ್ಮಾನ್ ಖಾನ್ ಲಭ್ಯರಾಗಿಲ್ಲ. ಅವರ ಬದಲು ಅನಿಲ್ ಕಪೂರ್ ಎಂಟ್ರಿ ಕೊಟ್ಟಿದ್ದಾರೆ.
ಸಲ್ಮಾನ್ ಖಾನ್ ಯಾಕೆ ಇಲ್ಲ?
ಈ ವರ್ಷದ ಆರಂಭದಲ್ಲಿ ‘ಬಿಗ್ ಬಾಸ್’ ಹಿಂದಿ ಸೀಸನ್ 17 ಅನ್ನು ಸಲ್ಮಾನ್ ಖಾನ್ ಮುಗಿಸಿಕೊಟ್ಟಿದ್ದಾರೆ. ಅದಾಗಿ ಕೆಲವೇ ತಿಂಗಳಿಗೆ ಈಗ ಹಿಂದಿ ಓಟಿಟಿ ಸೀಸನ್ ಆರಂಭವಾಗುತ್ತಿದೆ. ಅಲ್ಲದೆ, ಸಲ್ಮಾನ್ ಖಾನ್ ಅವರು ಈಗ ಹೊಸ ಸಿನಿಮಾ ‘ಸಿಕಂದರ್’ ಕಡೆಗೆ ಹೆಚ್ಚು ಗಮನ ನೀಡಬೇಕಿದೆ. ಆ ಕಾರಣಕ್ಕಾಗಿ ಓಟಿಟಿ ವರ್ಷನ್‌ನಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲುಗಿನಲ್ಲಿ ನಡದಿತ್ತು ಬದಲಾವಣೆ
ತೆಲುಗು ‘ಬಿಗ್ ಬಾಸ್’ ಶೋನಲ್ಲಿ ಆರಂಭದಿಂದಲೂ ನಿರೂಪಕರ ಬದಲಾವಣೆ ಆಗುತ್ತಲೇ ಇರುತ್ತದೆ. ಜೂನಿಯರ್ ಎನ್‌ಟಿಆರ್, ನಾನಿ ಬಳಿಕ ಈಗ ನಾಗಾರ್ಜುನ ಅವರು ಶೋವನ್ನು ನಡೆಸಿಕೊಡುತ್ತಿದ್ದಾರೆ. ಅವರು ಗೈರಾದಾಗ ಕೆಲವು ಸಂಚಿಕೆಗಳನ್ನು ಬೇರೊಬ್ಬರ ಬಳಿ ನಿರೂಪಣೆ ಮಾಡಿಸಲಾಗಿದೆ. ಇನ್ನು, ಕನ್ನಡ ಬಿಗ್ ಬಾಸ್ ಶೋನ ಹತ್ತು ಸೀಸನ್ ಮತ್ತು ಒಂದು ಓಟಿಟಿ ಸೀಸನ್ ಅನ್ನು ‘ಕಿಚ್ಚ’ ಸುದೀಪ್ ಒಬ್ಬರೇ ನಿಭಾಯಿಸಿರುವುದು ವಿಶೇಷ. ಹಾಗೆಯೇ, ತಮಿಳಿನಲ್ಲಿ ನಟ ಕಮಲ್ ಹಾಸನ್ ಅವರು ನಡೆಸಿಕೊಂಡು
ಅನಿಲ್ ಕಪೂರ್ ಫ್ಯಾಮಿಲಿ ಫುಲ್ ಖುಷ್
ಇನ್ನು, ‘ಬಿಗ್ ಬಾಸ್’ನಂತಹ ಜನಪ್ರಿಯ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುವಂತಹ ಅವಕಾಶ ಅನಿಲ್ ಕಪೂರ್‌ಗೆ ಸಿಕ್ಕಿರುವುದರಿಂದ, ಸಹಜವಾಗಿಯೇ ಫ್ಯಾಮಿಲಿ ಸದಸ್ಯರು ಖುಷಿಯಾಗಿದ್ದಾರೆ. ಅನಿಲ್ ಕಪೂರ್ ಪುತ್ರಿ, ನಟಿ ಸೋನಮ್ ಕಪೂರ್, ಅನಿಲ್ ಕಪೂರ್ ಸಹೋದರ ಬೋನಿ ಕಪೂರ್, ಪುತ್ರ ನಟ ಅರ್ಜುನ್ ಕಪೂರ್ ಅವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ‘ಬಿಗ್ ಬಾಸ್’ ಹಿಂದಿ ಓಟಿಟಿ ಸೀಸನ್ 3 ಅತೀ ಶೀಘ್ರದಲ್ಲೇ ಜಿಯೋ ಸಿನಿಮಾದಲ್ಲಿ ಪ್ರಸಾರ ಆರಂಭಿಸಲಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com