ಆಂಧ್ರಪ್ರದೇಶ ಪ್ರವಾಸ ಕೈಗೊಂಡಿದ್ದ ತುಮಕೂರು ಜಿಲ್ಲೆಯ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕರ್ನೂಲ್ ಬಳಿ ನಡೆದಿದೆ.
ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ನವೀನ್, ಸಂತೋಷ್, ಲೋಕೇಶ್ ಎಂದು ಗುರುತಿಸಲಾಗಿದೆ.
ಮೃತ ನವೀನ್, ಸಂತೋಷ್, ಲೋಕೇಶ್ ಸೇರಿ ಒಟ್ಟು 6 ಮಂದಿ ಕಾರಿನಲ್ಲಿ ಆಂಧ್ರ ಪ್ರವಾಸಕ್ಕೆ ಹೋಗಿದ್ರು.
ಕರ್ನೂಲ್ ಬಳಿ ನಿಯಂತ್ರಣ ತಪ್ಪಿದ ಪ್ರವಾಸಿಗರಿದ್ದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮೂವರು ಮೃತಪಟ್ಟರೇ, ಉಳಿದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಕೆಂಕೆರೆಯಲ್ಲಿ ಸ್ಮಶಾನ ಮೌನ ಆವರಿಸಿದೆ.. ಮೃತರ ಬಂಧುಬಾಂಧವರ ಆಕ್ರಂದನ ಮುಗಿಲುಮುಟ್ಟಿದೆ.