ರಾಜ್ಯದಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ವಿತರಣೆ ಮಾಡಲಾಯ್ತು.
ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರು ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ ವಿತರಿಸಲಾಯ್ತು.
ತಾಪಮಾನ ಹೆಚ್ಚಳ ಮತ್ತು ಧೂಳಿನಿಂದ ಪೊಲೀಸರ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಗಟ್ಟಲು ಈ ಹವಾನಿಯಂತ್ರಿತ ಹೆಲ್ಮೆಟ್ ನೀಡಲಾಗ್ತಿದೆ.
ಇದರ ಜೊತೆಗೆ, ಪೊಲ್ಯೂಷನ್ ಕಂಟ್ರೋಲ್ ಮಾಸ್ಕ್, ವಿಂಚುವ ಜಾಕೆಟ್ ಹಾಗೂ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಲು ಬ್ಯಾಟನ್ ಗಳನ್ನು ವಿತರಣೆ ಮಾಡಲಾಯ್ತು.