ಫ್ರೀಡಂ ಟಿವಿ-ಜನಸಾಮಾನ್ಯರ ಶಕ್ತಿ. ಕನ್ನಡಿಗರ ಸ್ವಾಭಿಮಾನದ ಟಿವಿ ಚಾನೆಲ್. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ಎಲ್ಲಾ ರಾಜ್ಯಗಳಲ್ಲಿ ಪ್ರಸಾರ ಕಾಣುತ್ತಿದೆ. ಹಾಥ್ವೇ, ಜಿಯೋ, KCL ಸೇರಿದಂತೆ ಪ್ರಮುಖ ಸೆಟ್ಟಾಪ್ ಬಾಕ್ಸ್ಗಳ ಮೂಲಕ ನಿಮ್ಮ ಮನೆಯ ಕಿರುತೆರೆ ತಲುಪುತ್ತಿದೆ. ಜನಸಾಮಾನ್ಯರನ್ನೇ ಆದ್ಯತೆಯಾಗಿಸಿಕೊಂಡು ಸುದ್ದಿ ಹಾಗೂ ಮನೋರಂಜನ ಕಾರ್ಯಕ್ರಮಗಳನ್ನು ನೀಡುವ ಜನಪ್ರಿಯ ವಾಹಿನಿಯಾಗಿದೆ.
ಬೆಂಗಳೂರಿನ ಶ್ರೀಮಂತ ಬಡಾವಣೆ ಸದಾಶಿವನಗರದಲ್ಲಿದ್ದರೂ ಕಟ್ಟ ಕಡೆಯ ಕಾಮನ್ ಮ್ಯಾನ್ ಪರ ಕೆಲಸ ಮಾಡುವ ಏಕೈಕ ನ್ಯೂಸ್ ಚಾನೆಲ್. ಅಧಿಕಾರಸ್ಥರಿಂದ ಟೇಪ್ ಕಟ್ ಮಾಡಿಸಿ ಕೊಳ್ಳಲು ಹವಣಿಸುವವರ ಮಧ್ಯೆ ರೈತ, ಕಾರ್ಮಿಕ, ಚಾಲಕ ಹಾಗು ಪೌರ ಕಾರ್ಮಿಕ ಮಹಿಳೆಯಿಂದ ಲೋಕಾರ್ಪಣೆಗೊಂದಿದ್ದ ಹೆಮ್ಮೆಯ ವಾಹಿನಿ.
ವಿಧಾನಸೌಧದ ಮೊಗಸಾಲೆಯಿಂದ ಹಿಡಿದು ನಿಮ್ಮೂರಿನ ಪಂಚಾಯ್ತಿ ಪಡಸಾಲೆವರೆಗೆ ಎಲ್ಲ ಸುದ್ದಿಗಳನ್ನ ನಾವು ಯಾವುದೆ ಅಡ್ಡಿ ಇಲ್ಲದೆ ನಿಮಗೆ ತಲುಪಿಸಿದ್ದೇವೆ.. ಈ ಹಾದಿಯಲ್ಲಿ ನಾವು ರಾಕ್ಷಸ ಶಕ್ತಿ ಉಳ್ಳವರನ್ನ, ನಿರ್ದಯಿ ಕಟುಕರನ್ನ, ಅಧಿಕಾರಸ್ಥ ರಾಜಕಾರಣಿಗಳನ್ನ ಎದುರು ಹಾಕಿಕೊಂಡಿದ್ದೇವೆ.. ನಾವು ಇವೆಲ್ಲವನ್ನ ಮಾಡಿದ್ದು ನಿಮಗೋಸ್ಕರ.. ಅರ್ಥಾತ್ ಕರ್ನಾಟಕದ ಜನಸಾಮಾನ್ಯರಿಗೋಸ್ಕರ..
ನಾವು ಹಲವು ಹಗರಣಗಳನ್ನ ಬಯಲಿಗೆಳೆದಿದ್ದೇವೆ, ಸುಭಗರ ಮುಖವಾಡ ಕಳಚಿದ್ದೇವೆ.. ಹೂತು ಹೋದ ಸತ್ಯವನ್ನ ಹೆಕ್ಕಿ ಹೊರತೆಗೆದಿದ್ದೇವೆ… ಅಸಹಾಯಕ ಜನರ ನೋವಿಗೆ ಮಿಡಿದಿದ್ದೇವೆ. ಸುದ್ದಿ ಪ್ರಸಾರದ ವಿಚಾರದಲ್ಲಿ ಫ್ರೀಡಂ ಟಿವಿಯದ್ದು ಯಾರಿಗೂ ಕೇರ್ ಮಾಡದ ದಿಟ್ಟ ನಡೆ..
ಹಣ ಬಲ, ತೋಳ್ಬಲ, ಜಾತಿ ಬಲದ ಗರ್ವದಲ್ಲಿಮೆರೆಯುವ ದೈತ್ಯ ಶಕ್ತಿಗಳ ಎದುರು ನಿಮ್ಮ ಫ್ರೀಡಂ ಟಿವಿ ಹುಲಿಗೂ ಸೋಲದ ಹನಿ ಬ್ಯಾಡ್ಜರ್‌ನಂತೆ ದಿಟ್ಟವಾಗಿ ನಿಂತಿದೆ..
ಅಧಿಕಾರಸ್ತ ರಾಜಕಾರಣಿಗಳ ರಕ್ಕಸ ಕ್ರೌರ್ಯದೆದುರು ನಿಮ್ಮ ಫ್ರೀಡಂ ಟಿವಿ ಗೊಲಿಯೆಟ್ ಎದುರು ಡೇವಿಡ್ನಂತೆ ಸೆಣೆಸಿದೆ
ನಿಮ್ಮ ಫ್ರೀಡಂ ಟಿವಿ ತಂಡ ಮತ್ತಷ್ಟು ಹುರುಪಿಂದ ಕನ್ನಡಿಗರ ಸೇವೆಗೆ ಅಣಿಯಾಗಿ ನಿಂತಿದೆ.. ಜಾತಿ ಧರ್ಮ ಹಣ, ಅಧಿಕಾರ ಯಾವುದೂ ಇಲ್ಲದ ಜನಸಾಮಾನ್ಯನಿಗೆ ಮಾಹಿತಿ ಶಕ್ತಿ ನೀಡುವ ಕೆಲಸವನ್ನ ನಾವು ಮತ್ತಷ್ಟು ಹುರುಪಿನಿಂದ ಮಾಡಲಿದ್ದೇವೆ. ಈ ಹಾದಿಯಲ್ಲಿ ಸಮಸ್ತ ಕನ್ನಡಿಗರ ಪ್ರೀತಿಯೊಂದನ್ನ ಬಿಟ್ಟು ಬೇರೇನನ್ನೂ ಫ್ರೀಡಂ ಟಿವಿ ನಿರೀಕ್ಷಿಸುವುದಿಲ್ಲ.. ಭವ್ಯ ಭಾರತದ, ಜನಮೆಚ್ಷಿದ ಪ್ರಜಾತಂತ್ರದ ಹೆಮ್ಮರದಲ್ಲಿ ಪುಟ್ಟ ಗೂಡು ಕಟ್ಟಿರುವ ಫ್ರೀಡಂ ಟಿವಿ ಬಳಗಕ್ಕೆ ನಿಮ್ಮೆಲ್ಲರ ಸಲಹೆ, ಸಹಕಾರ ಅನುಕ್ಷಣಕ್ಕೂ ಬೇಕಿದೆ… ನೀವು ನಮ್ಮ ಮೇಲಿಟ್ಟಿರುವ ಭರವಸೆಯನ್ನ ನಾವೆಂದೂ ಹುಸಿಮಾಡುವುದಿಲ್ಲ… ಯಾಕಂದ್ರೆ, ಫ್ರೀಡಂ ಟಿವಿ.. ಇದು ಜನಸಾಮಾನ್ಯರ ಶಕ್ತಿ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ: 91640 72277, 96866 51049
Email id : freedomtv.kannada@gmail.com, salesatfreedomtv@gmail.com
www.freedomtvlive.com
Hathway Settop Box No: 213
Jio Settop Box No: 213