Top Newsಸಿನಿಮಾಸುದ್ದಿ

ಅಂಬಿ ಮನೆಗೆ ಜ್ಯೂನಿಯರ್‌ ಮೊಮ್ಮಗನ ಆಗಮನ; ಮಗುವನ್ನು ಮುದ್ದಾಡಿದ ಸುಮಲತಾ

ರೆಬೆಲೆ ಸ್ಟಾರ್ ಅಂಬರೀಷ್ ಮನೆಯಲ್ಲಿ ಈಗ ಖುಷಿ ಮನೆ ಮಾಡಿದೆ. ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಪಾಲಕರಾಗಿದ್ದಾರೆ. ಅವಿವಾ ಅವರು ಗಂಡುಮಗುವಿಗೆ ಜನ್ಮನೀಡಿದ್ದಾರೆ. ಇಂದು ಮಗು ಜನಿಸಿದೆ. ಮಗುವಿನ ಜೊತೆ ಸುಮಲತಾ ಅಂಬರೀಷ್ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯವನ್ನು ಮಾಡಿಸಿಕೊಂಡಿದ್ದ ಆವಿವಾ ಅಭಿಷೇಕ್ ಸದ್ಯದಲ್ಲಿಯೇ ಹೊಸ ಅತಿಥಿ ಬರಲಿದ್ದಾನೆ ಎಂಬ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಈಗ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದು. ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.‌

ಅಭಿಷೇಕ್ ಮತ್ತು ಅವಿವಾ ಅವರ ಮದುವೆಯು ಕಳೆದ ವರ್ಷ ಜೂ.5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು.

Comments (0)

Your email address will not be published. Required fields are marked *

Back to top button