ಎಬಿಡಿ ಅವರಿಗೆ ಭಾರತದ ಜೊತೆ ಒಳ್ಳೆಯ ನಂಟಿದೆ. ಇದಕ್ಕೆ ಕಾರಣ ಆಗಿರೋದು ಐಪಿಎಲ್. ಎಬಿಡಿ ಅವರು ಆರ್ಸಿಬಿ ಪರ ಆಡಿದ್ದರು. ಅವರಿಗೆ ಕರ್ನಾಟಕ ಹಾಗೂ ಭಾರತದಲ್ಲಿ ಅಪಾರ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು 10 ಸಾವಿರ ‘ಪುಷ್ಪ 2’ ಟಿಕೆಟ್ ಗಿವ್ ಅವೇ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ.
ಬೆಟ್ಟಿಂಗ್ ಆ್ಯಪ್ ಒಂದರ ಪ್ರಮೋಷನ್ಗೆ ಈ ಗಿವ್ಅವೇನ ಮಾಡಿದ್ದಾರೆ ಎಬಿಡಿ. ಈ ಆ್ಯಪ್ನಲ್ಲಿ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಡಿಪೋಸಿಟ್ ಮಾಡಬೇಕು. ಇದರಲ್ಲಿ 100 ರೂಪಾಯಿಗಿಂತ ಹೆಚ್ಚಿನ ಹಣ ಡಿಪೋಸಿಟ್ ಮಾಡಿದ ಮೊದಲ 10 ಸಾವಿರ ಮಂದಿಗೆ ‘ಪುಷ್ಪ 2’ ಟಿಕೆಟ್ ಕೊಡೋದಾಗಿ ಎಬಿಡಿ ಹೇಳಿದ್ದಾರೆ.
ಎಬಿಡಿ ಕೂಡ ‘ಪುಷ್ಪ 2’ ಚಿತ್ರದ ಟಿಕೆಟ್ ಗಿವ್ ಅವೇ ನೀಡಿರೋದು ಅನೇಕರಿಗೆ ಖುಷಿ ಕೊಟ್ಟಿದೆ. ಅವರು ಪ್ರಮೋಟ್ ಮಾಡ್ತಿರೋದು ಬೆಟ್ಟಿಂಗ್ ಆ್ಯಪ್. ಈ ಕಾರಣಕ್ಕೆ ಕೆಲವರು ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಇನ್ನೂ ಕೆಲವರು ‘ಪುಷ್ಪ 2’ ಚಿತ್ರದ ಪ್ರಮೋಷನ್ ಆಯ್ತು ಎಂದು ಸಂತಸ ಹೊರಹಾಕಿದ್ದಾರೆ.