ಆಮ್ ಆದ್ಮಿ ಪಕ್ಷ ಶನಿವಾರದಂದು ಅರವಿಂದ್ ಕೇಜ್ರಿವಾಲ್ ಮನೆ ಮನೆಗೆ ಹೋಗಿ ಪ್ರಚಾರ ಮಾಡುವಾಗ ಅವರ ಕಾರ್ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದೆ. ಫೆಬ್ರವರಿ 5 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸದ್ಯ ಪ್ರಚಾರದ ಅಖಾಡಕ್ಕೆ ಇಳಿದಿವೆ. ಅದೇ ರೀತಿ ಆಪ್ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕೂಡ ಇಂದು ಪ್ರಚಾರಕ್ಕೆ ಹೋಗಿದ್ದರು ಈ ವೇಳೆ ಅವರ ಕಾರಿನ ಮೇಲೆ ಕಲ್ಲೆಸೆದು ದಾಳಿ ನಡೆಸಲಾಗಿದ್ದು, ಬಿಜೆಪಿ ನಮ್ಮ ಮೇಲೆ ಕಲ್ಲು ಎಸೆಯುವ ಮೂಲಕ ನಮ್ಮ ಪ್ರಚಾರದ ಕಾರ್ಯಕ್ರಮವನ್ನು ಹಾಳುಗೆಡುವಲು ಹೊರಟಿದೆ ಎಂದು ಆಪ್ ಆರೋಪಿಸಿದೆ.
Arvind Kejriwal’s car allegedly hit two BJP workers, resulting in one breaking his leg.
BJP candidate Parvesh Verma rushed to the hospital amid growing public anger.#DelhiElection2025 #elections #ArvindKejriwal #ParveshVerma #AamAadmiParty pic.twitter.com/owgDxFQo6z
— Patna Pulse (@Patna_Pulse) January 18, 2025
ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರ ಗುಂಡಾಗಳು ಕೇಜ್ರಿವಾಲ್ ಕಾರ್ ಮೇಲೆ ಕಲ್ಲೆಸೆದು ಅವರನ್ನು ಗಾಯಗೊಳಿಸಿ, ಪ್ರಚಾರದ ಕಣಕ್ಕೆ ಇಳಿಯದಂತೆ ಮಾಡಬೇಕು ಎಂದು ಷಡ್ಯಂತ್ರ ರಚಿಸಿದ್ದಾರೆ. ಈ ನಿಮ್ಮ ಹೇಡಿತನದ ದಾಳಿಗಳಿಗೆ ಕೇಜ್ರಿವಾಲ್ ಹೆದರವುದಿಲ್ಲ. ದೆಹಲಿಯ ಜನರು ಈ ಒಂದು ಕೃತ್ಯಕ್ಕೆ ನಿಮಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಆಪ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.