ಯುಕೆ ಸಂಸತ್‌ನಲ್ಲಿ ಗಡಿನಾಡ ಬೀದರ್ (Bidar) ಜಿಲ್ಲೆಯ ಆದೀಶ್ ವಿಶ್ವಗುರು ಬಸವಣ್ಣನವರ (Basavanna) `ಇವನ್ಯಾರವ’ ವಚನ ಪಠಿಸುವ ಮೂಲಕ ಕನ್ನಡ (Kannada) ಪ್ರೇಮವನ್ನು ಮೆರೆದಿದ್ದಾರೆ.
ಬೀದರ್: ಬೀದರ್ ನಗರದ ಮೋಹನ್ ಮಾರ್ಕೆಟ್ ನಿವಾಸಿಯಾಗಿರುವ ಡಾ.ರಜಿನೀಶ್ ವಾಲಿ ಎಂಬುವವರ ಮಗ ಆದೀಶ್ ವಾಲಿ ಯುಕೆ ಸಂಸತ್‌ನಲ್ಲಿ ನಡೆದ ಇಂಗ್ಲೆಂಡ್ ಲೀಡರ್‌ಶಿಪ್ ಸ್ಪರ್ಧೆಯಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಮೂಲಕ ಸ್ಪರ್ಧೆಯಲ್ಲಿ ಭಾಗಿಯಾದ ಐಕೈಕ ಭಾರತೀಯನಾಗಿದ್ದಾರೆ. ಜೊತೆಗೆ ಲಂಡನ್ ಯುಕೆ ಕೌನ್ಸಿಲ್‌ನ (London UK Council) ಏಕೈಕ ಭಾರತೀಯ (Indian) ಸದಸ್ಯರಾಗಿದ್ದಾರೆ.ಇದನ್ನೂ ಓದಿ: ಜಂಬೂ ಸವಾರಿಗೆ ಸಿಎಂ ಪುಷ್ಪಾರ್ಚನೆ ಮಾಡೋದೆ ಅನುಮಾನ: ಶ್ರೀವತ್ಸ
ಯುಕೆ ಸಂಸತ್‌ನಲ್ಲಿ ವಿಶ್ವಗುರು ಬಸವಣ್ಣನವರ ಇವನ್ಯಾರವ ವಚನ ಪಠಿಸಿದ್ದಾರೆ. ಜೊತೆಗೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಆದೀಶ್ ವಾಲಿ ಕನ್ನಡದ ಕಂಪನ್ನು ಸೂಸಿದ್ದಾರೆ. ಇದನ್ನು ನೋಡಿದ ರಾಜ್ಯದ ಜನರು ಜೈಕಾರ ಹಾಕಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಈ ಹಿಂದೆ ಕಾನ್ವಕೇಷನ್ ಕಾರ್ಯಕ್ರಮದಲ್ಲಿ ಕನ್ನಡದ ಬಾವುಟ ಹಾರಿಸಿದ್ದ ಆದೀಶ್ ವಾಲಿ ಈ ಬಾರಿ ಯುಕೆ ಸಂಸತ್‌ನಲ್ಲಿ ಬಸವಣ್ಣನವರ ವಚನ ಪಠಿಸಿ ಕನ್ನಡದಲ್ಲೇ ಭಾಷಣ ಮಾಡಿ ಕನ್ನಡದ ಕಂಪು ಅರಳಿಸಿದ್ದಾರೆ.