ಧಾರವಾಡ: ನಟ ದರ್ಶನ್ ಆಂಡ್ ಗ್ಯಾಂಗ್ನ ಎ9 ಆರೋಪಿ ಧನರಾಜ್ ಅವರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಜೈಲು ಅಧಿಕಾರಿ ಮಹಾದೇವ ನಾಯಕ ಮಾಧ್ಯಮಗಳ ಜೊತೆ ಮಾತನಾಡಿ, ಇನ್ನೂ ಸಹ ಆರೋಪಿಯನ್ನು ಧಾರವಾಡ ಮೆಹಬೂಬ್ ನಗರದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದ್ದು, ಜೈಲಿನಲ್ಲಿ ಧನರಾಜ್‌ಗೆ ವೈದ್ಯಕೀಯ ಪರೀಕ್ಷೆ, ಬಳಿಕ ಸೆಲ್ಗೆ ಆರೋಪಿಯನ್ನು ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೂ ಕೇಂದ್ರ ಕಾರಾಗೃಹಕ್ಕೆ 65 ಸಿಸಿ ಕ್ಯಾಮೆರಾ ಕಣ್ಗಾವಲು ಇದೆ. ಎ9 ಆರೋಪಿ ಧನರಾಜ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದಿಲ್ಲ. ಸಾಮಾನ್ಯ ಕೈದಿಗಳಿಗೆ ನೀಡುವ ಸೌಲಭ್ಯ ನಿಯಮಾನುಸಾರ ನೀಡಲಾಗುವುದು ಎಂದರು.
ಜೈಲಿನಲ್ಲಿ ಸುಮಾರು 13 ಭದ್ರತಾ ಕೊಠಡಿ ಇದ್ದು, 618 ಕೈದಿಗಳು ಇದ್ದಾರೆ. ಮಹಿಳಾ ಕೈದಿ ಸೇರಿ 618 ಕೈದಿಗಳು ಇದ್ದಾರೆ. ಮಹಿಳಾ ಕೈದಿ ಸೇರಿ 675 ಕೈದಿಗಳಿದ್ದು, ಹೊಸ ಕೈದಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು, ಕೈದಿಗಳಿಗೆ ಯಾವುದೇ ವಿಶೇಷ ಸೌಲಭ್ಯ ನೀಡುವುದಿಲ್ಲ ಎಂದರು.