ತುಮಕೂರು; ಕುಣಿಗಲ್ ತಾಲೂಕಿನ ಕಿತ್ತಾನಮಂಗಲ ಕೆರೆಯಲ್ಲಿ ಮಹಿಳೆಯೊಬ್ಬರ ಅಸ್ಥಪಂಜರ ಪತ್ತೆಯಾಗಿದೆ. ವಿಚಾರಣೆ ಬಳಿಕ ಕೆಲವು ದಿನಗಳಿಂದ ಕಾಣೆಯಾಗಿದ್ದ ಕಲ್ಲಿಪಾಳ್ಯ ಗ್ರಾಮದ ರಂಜಿತಾ ಎಂಬ ಮಹಿಳೆಯ ಅಸ್ಥಿಪಂಜರ ಎನ್ನಲಾಗಿದೆ.
ರಂಜಿತಾ ಎಂಬುವವರು ಕಳೆದ 9 ತಿಂಗಳಿಂದ ಕಾಣೆಯಾಗಿದ್ದರು. ಅಸ್ಥಿಪಂಜರ ಪತ್ತೆ ಬಳಿಕ ಪೋಲಿಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಅಸ್ಥಿಪಂಜರದ ಬಳಿ ಕಾಲು ಚೈನ್, ನೈಟಿ ಕೈಬಳೆಗಳು ಪತ್ತೆ ಹಿನ್ನಲೆ ಕೆಲವು ತಿಂಗಳಿಂದ ಕಾಣೆಯಾಗಿದ್ದ ರಂಜಿತಾ ಎಂಬುವವರು ಎನ್ನಲಾಗಿದೆ. ರಂಜಿತಾಳ ಅಸ್ಥಿಪಂಜರ ಸಿಕ್ಕ ಕೊಲೆಯೋ ಆತ್ಮಹತ್ಯೆಯೋ ಪೊಲೀಸ್ ತನಿಖೆ ಬಳಿಕ ನಿಜಾಂಶ ತಿಳಿಯಬೆಕಿದೆ.