ಹುಮನಾಬಾದ್: ಹಾರಾಡುತ್ತಿದ್ದ ಗಾಳಿಪಟವನ್ನು ಹಿಡಿಯಲು ಹೋಗಿ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಶಶಿಕುಮಾರ್ ಶಿವಾನಂದ ಡೊಂಗರಗಾಂವ್ (19) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ಶಶಿಕುಮಾರ್ ತನ್ನ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸಲು ಕಟ್ಟಡವೊಂದರ ಶೆಡ್ ಮೇಲೆ ಹತ್ತಿದ್ದ ಎನ್ನಲಾಗಿದೆ.
ಗಾಳಿಪಟ ಹಾರಿಸುವಾಗ ದಾರ ತುಂಡಾಗಿದ್ದು, ಈ ವೇಳೆ ಹಾರಿಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.


