
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಜಲಾಶಯದ ಕೋಡಿ ನೀರಿನಲ್ಲಿ ಯುವಕ ಕೊಚ್ಚಿ ಹೋಗುತ್ತಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾನೆ..
ಒಂದೇ ವರ್ಷದದಲ್ಲಿ ಸತತ ಎರಡನೇ ಬಾರಿಗೆ ಕೋಡಿ ಬಿದ್ದಿರುವ ಬರದನಾಡಿನ ಜೀವನಾಡಿ ವಿವಿಸಾಗರ ಜಲಾಶಯದ ಕೋಡಿನೀರು ವೀಕ್ಷಿಸಲು ನಿತ್ಯ ಸಾವಿರಾರು ಜನ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಈ ವೇಳೆ ಯುವಕನೋರ್ವ ಹುಚ್ಚು ಸಾಹಸಕ್ಕೆ ಮುಂದಾಗಿದ್ದು, ಆಯತಪ್ಪಿ ಹರಿಯುವ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ. ಆದರೆ ಅಲ್ಲಿನ ಸಾರ್ವಜನಿಕರು ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದ ಹಗ್ಗದ ಸಹಾಯದೊಂದಿಗೆ ಪ್ರಾಣಾಪಾಯದಿಂದ ಯುವಕ ಸೇಫಾಗಿ ದಡ ಸೇರಿದ್ದಾನೆ.
ಅಲ್ಲದೇ ವಿವಿಸಾಗರದ ಹಿನ್ನೀರಿನಲ್ಲಿ ಈಜಾಡದಂತೆ ಹಾಗೂ ನೀರಿಗೆ ಇಳಿಯದಂತೆ ಪೊಲೀಸರು ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಯುವಕರು ಈ ರೀತಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಲು ಮುಂದಾಗಿರೋದು ಮಾತ್ರ ವಿಪರ್ಯಾಸ.




