ಮೈಸೂರು: ಶಾಲಾ ವಿದ್ಯಾರ್ಥಿನಿ ತನ್ನಿಂದ ಗರ್ಭಿಣಿ ಆಗಿದ್ದಾಳೆ ಎಂಬ ಸುಳ್ಳು ಆರೋಪಕ್ಕೆ ಹೆದರಿ 27 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ..
ರಾಮು ಎಂಬ ಯುವಕ ನಾಲೆಗೆ ಹಾರಿ ಸಾವನ್ನಪ್ಪಿದ್ದಾನೆ.. ಆತ್ಮಹತ್ಯೆಗೂ ಮುನ್ನ ಯುವಕ ವಾಯ್ಸ್ ನೋಟ್ ರೆಕಾರ್ಡ್ ಮಾಡಿ, ತನ್ನ ಮೇಲಿನ ಆರೋಪಗಳೆಲ್ಲ ಸುಳ್ಳು. ಎಲ್ಲದಕ್ಕೂ ಆ ಶಾಲೆಯ ಪಿಟಿ ಮಾಸ್ತೆರೇ ಕಾರಣ ಎಂದು ವಾಯ್ಸ್ ನೋಟ್ ಹಾಕಿ ಸಾವನ್ನಪ್ಪಿದ್ದಾರೆ..
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡಕೂರು ನಿವಾಸಿ ರಾಮು, ವಿದ್ಯಾರ್ಥಿನಿ ಜೊತೆ ಸಲುಗೆಯಿಂದ ಮಾತಾಡಿದ್ದಕ್ಕೆ ತನ್ನ ಮೇಲೆ ಆರೋಪ ಬಂದಿದೆ. ವಿದ್ಯಾರ್ಥಿನಿ ಗರ್ಭಿಣಿಯಾಗುವುದಕ್ಕೆ ನಾನು ಕಾರಣ ಅಲ್ಲ. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದಾಗಿ ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ, ವೈದ್ಯರು ಬಂದು ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ್ದರು. ಆಗ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಶಾಲೆಗೆ ಕಳಂಕ ಬರುತ್ತದೆ ಎಂದು ಅಂತ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.
ಇನ್ನು ಅಕ್ಟೋಬರ್ 31ರಂದು ವಾಯ್ಸ್ ನೋಟ್ ಹಾಕಿ ಯುವಕ ನಾಪತ್ತೆಯಾಗಿದ್ದ. ಇದೀಗ ಬೆಟ್ಟದ ತುಂಗಾ ನಾಲೆಯಲ್ಲಿ ಯುವಕನ ದೇಹ ಪತ್ತೆಯಾಗಿದೆ. ಅಲ್ಲದೆ, ಡಿಎನ್ಎ ಟೆಸ್ಟ್ ಮೂಲಕ ತಪ್ಪಿತಸ್ಥರ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ವಾಯ್ಸ್ ನೋಟ್ ಮೂಲಕ ಒತ್ತಾಯಿಸಿದ್ದಾನೆ.


