

ತಲೆ ಮೇಲೆ ಶಾಲಾ ವಾಹನ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಶಾಲಾ ವಾಹನ ಚಾಲಕನ ನಿರ್ಲಕ್ಷ್ಯಕ್ಕೆ ರಾಜಶೇಖರ ಎಂಬುವರ ಪುತ್ರಿ ಖುಷಿ ಬನ್ನಟ್ಟಿ 3 ವರ್ಷದ ಮೃತ ಮಗುಪಟ್ಟಿದೆ. ಶಾಲಾ ವಾಹನದಲ್ಲಿ ಬಂದಿದ್ದ ಅಣ್ಣನನ್ನ ಕರೆಯಲು ತಂದೆ ಹಿಂದೆಯೇ ಓಡೋಡಿ ಬಂದಿದ್ದ ಮಗು, ಆದರೆ ತನ್ನ ಮಗಳು ತನ್ನ ಹಿಂದೆಯೇ ಬಂದಿದ್ದು ಅರಿಯದ ತಂದೆ, ಈ ವೇಳೆ ಚಾಲಕ ಹಿಂದಕ್ಕೆ ತಿರುಗಿಸಿಕೊಳ್ಳೊವಾಗ ಚಕ್ರದಡಿ ಸಿಲುಕಿ ತಲೆ ಮೇಲೆ ಹರಿದಿದೆ, ಪ್ರಕರಣ ಸಂಬಂಧ ಶಾಲಾ ವಾಹನ ಚಾಲಕ ಶ್ರೀಶೈಲ್ ನ್ನು ವಶಕ್ಕೆಪಡೆದಿರುವ ಅಫಜಲಪುರ ಪೊಲೀಸ್ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ….


