ಬೆಂಗಳೂರು : ತನ್ನ ಹುಟ್ಟುಹಬ್ಬ ದಿನವೇ ಕಾಲೇಜಿನ ಹಾಸ್ಟೆಲ್‌ನ 2ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಬನ್ನೇರುಘಟ್ಟ ರಸ್ತೆಯ ಐಐಎಂಬಿ ವಿದ್ಯಾರ್ಥಿ ನಿಲಯ್ ಕೈಲಾಸ್‌ಬಾಯ್ ಪಟೇಲ್ (28) ಮೃತಪಟ್ಟಿದ್ದು, 2 ದಿನಗಳ ಹಿಂದೆ ತನ್ನ ಸ್ನೇಹಿತರ ಜತೆ ಪಟೇಲ್ ಹುಟ್ಟುಹಬ್ಬದ ಸಂಭ್ರಮ ಮುಗಿಸಿದ ಬಳಿಕ ಈ ಅವಘಡ ಸಂಭವಿಸಿದೆ.
ಶನಿವಾರ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಪಟೇಲ್ ಮೂಲತಃ ಗುಜರಾತ್ ರಾಜ್ಯದ ಸೂರತ್‌ನವನಾಗಿದ್ದು, ಬನ್ನೇರುಘಟ್ಟ ರಸ್ತೆಯ ಐಐಎಂಬಿಯಲ್ಲಿ 2ನೇ ವರ್ಷದ ಸಾತ್ನಕೋತ್ತರ ವಿದ್ಯಾರ್ಥಿಯಾಗಿದ್ದ.


