ಬೆಂಗಳೂರು: ದೇಶದಲ್ಲಿಗ ಯುದ್ದದ ಕಾರ್ಮೋಡ ಕವಿದಿದೆ. ಆತಂಕದಲ್ಲೆ ಕಾಲ ದುಡುತ್ತಿರೋ ಸಮಯವಿದು. ಇಂತಹ ಹೊತ್ತಲ್ಲಿ ವೆಪನ್ ಹಿಡಿದು ರಾಜಾಜಿ ನಗರದ ಬಹುಮಹಡಿ ಕಟ್ಟಡದಲ್ಲಿರುವ ಜಿಯೋಮೆಟ್ರಿ ಪಬ್ ಒಳಗಡೆ ಹೋಗಿ ಅವಿತು ಕೊಂಡಿದ್ದಾನೆ ಎಂಬ ಸುದ್ದಿ ಹಬ್ಬಿತು.
112ಗೆ ಬಂದ ಒಂದು ಪೋನ್ ಕಾಲ್ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿಬಿಟ್ಟಿತ್ತು.ಎಷ್ಟರ ಮಟ್ಟಿಗೆ ಅಂದರೆ, ಯಾರೋ ಭಯಫೋತ್ಪಾದಕ ಅಲ್ಲಿಗೆ ನುಗ್ಗಿರಬೇಕು ಎಂಬ ಶಂಕೆಯಲ್ಲಿ ಪೊಲೀಸರು ಪ್ಲಾನ್ ಮಾಡಿ ಕಾರ್ಯಚರಣೆಗೆ ಇಳಿದಿದ್ದರು.
ಆರಂಭದ ಒಂದು ಗಂಟೆಯ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಹಾಗಾಗಿ ಸ್ಥಳಕ್ಕೆ ಡಾಗ್ ಸ್ಕ್ವಾಡ್ , ಬಾಂಬ್ ಸ್ಕ್ವಾಡ್ , ಮೂರು- ಮೂರು ಕೆ.ಎಸ್ಆರ್ ಪಿ ತುಕಡಿಗಳನ್ನು ಕರೆಸಿಕೊಳ್ಳಲಾಯ್ತು. ಪಬ್ ಮುಂದಿನ ರಸ್ತೆಯ ಎರಡು ಬದಿ ಬಂದ್ ಮಾಡಿ ಡ್ರೋನ್ ಬಳಸಿ ಪೊಲೀಸರು ಆಪರೇಷನ್ ನಡೆಸಿದರು. ಆಗಲೂ ಅನುಮಾನಾಸ್ಪದ ವ್ಯಕ್ತಿ ಬಗ್ಗೆ ಯಾವುದೇ ಸುಳಿವು ಪತ್ತೆ ಆಗದ ಕಾರಣ ಡಿಸ್ವಾಟ್ ತಂಡ ಕರೆಸಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಜಾಲಾಡಲಾಯ್ತು. ಆದ್ರೆ ಆತ ಸಿಗೋದೇ ಇಲ್ಲ.
ಕಡೆಗೆ ಸಿಸಿಟಿವಿ ಪರಿಶೀಲಿಸಿದಾಗ ಗೊತ್ತಾಗಿದ್ದು ಪಬ್ ಗೆ ನುಗ್ಗಿದ್ದು ಓರ್ವ ಕಳ್ಳ ಎಂಬುದು.. ಪಬ್ ಗಲ್ಲಾಪೆಟ್ಟಿಗೆಯಲ್ಲಿದ್ದ 50 ಸಾವಿರ ನಗದು ದೋಚಿ ಕಳ್ಳ ಸದ್ದಿಲ್ಲದೇ ಎಸ್ಕೇಪ್ ಆಗಿದ್ದ..
ಇದ್ರಿಂದ ಪೊಲೀಸರು, ಸ್ವಾಟ್ ಟೀಂ ಎಲ್ರೂ ಬೆಸ್ತು ಬಿದ್ರು. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪಿಸ್ತೂಲ್ ಹಿಡಿದು ಕಳ್ಳತನಕ್ಕೆ ಬಂದಿದ್ದ ಕಳ್ಳನಿಗಾಗಿ ಹುಡಕಾಟ ನಡೆಸಿದ್ದಾರೆ