#Exclusive NewsTop Newsಸುದ್ದಿ

ಅಪ್ಪ-ಅಮ್ಮನ ಜತೆ ಸೇರಿ ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಮೆಣಸಿನ ಪುಡಿ, ರಾಡ್ ಹಾಕಿ ಚಿತ್ರಹಿಂಸೆ….

ಅಪ್ಪ-ಅಮ್ಮನ ಜತೆ ಸೇರಿಕೊಂಡು ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಮೆಣಸಿನ ಪುಡಿ, ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರಾಜ್​ಗಢದಲ್ಲಿರುವ ತಮ್ಮ ಮನೆಯಲ್ಲಿ ಆಕೆಯನ್ನು ಇನ್ನೊಬ್ಬರ ಜತೆ ನೋಡಿದ್ದಾಗಿ ಹೇಳಿರುವ ಅತ್ತೆ ಮಾವ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ.

ಸಂತ್ರಸ್ತೆಯ ಖಾಸಗಿ ಭಾಗಗಳು, ತೊಡೆಗಳು ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟು ಹಾಕಿದ್ದಾರೆ, ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಾಕಿದ್ದಾರೆ.ಡಿಸೆಂಬರ್ 13 ರಂದು ಈ ಘಟನೆ ನಡೆದಿದೆ. ಪತಿ ಮತ್ತು ಮಾವ ಸಂತ್ರಸ್ತೆಯನ್ನು ಬೈಕ್‌ನಲ್ಲಿ ಕರೆದೊಯ್ದು ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button