ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಲಕ್ಷಾಂತರ ಜನರಿಗೆ ಜೀವದಾನ ಮಾಡಿದೆ. ಜೀವನದಲ್ಲಿ ಸೋತು, ನೊಂದವರಿಗೆ ಭರವಸೆಯ ನಗರವಾಗಿ ಕೈ ಹಿಡಿದಿದೆ. ಅದೆಷ್ಟೋ ಯುವಕ, ಯುವತಿಯರು ತಮ್ಮ ಕುಟುಂಬ, ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುವುದು ಪದೇ ಪದೇ ಸಾಬೀತಾಗುತ್ತಿದೆ. ಸಜ್ಜನರಿರುವ ವಿ.ವಿ. ಪುರಂನಲ್ಲಿ ಕಾಮುಕನ ಅಟ್ಟಹಾಸ ಹೆಚ್ಚಾಗಿದೆ.
ಬೈಕ್ನಲ್ಲಿ ಬರುವ ಕಾಮುಕನೋರ್ವ ವಿ.ವಿ. ಪುರಂ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಕಿರುಕುಳ ನೀಡುತ್ತಿದ್ದಾನೆ. ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿ ಆ ರಸ್ತೆಗೆ ಇಳಿಯುವ ಕಾಮುಕ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಯುವತಿಯರಿರುವ ಕಡೆ ಬೈಕ್ ನಿಲ್ಲಿಸಿ ಮರ್ಮಾಂಗ ತೋರಿಸಿ ಪರಾರಿ ಆಗ್ತಾನೆ. ಕಾಮುಕನ ಕೃತ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿಯರು ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಕಾಮುಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ನಾಗರಭಾವಿ ಔಟರ್ ರಿಂಗ್ ರೋಡ್ ಬಳಿ ಫ್ಯಾಮಿಲಿ ಜೊತೆ ಕಾರಿನಲ್ಲಿ ಹೋಗ್ತಿದ್ದ ಮಹಿಳೆಗೆ ಕೆಲ ಪುಂಡರು ವ್ಹೀಲಿಂಗ್ ಮಾಡಿ ಭಯ ಪಡಿಸಿ ಪುಂಡಾಟ ಮೆರೆದಿದ್ದಾರೆ. ನಿನ್ನೆ ರಾತ್ರಿ 11.40ರ ಸುಮಾರಿಗೆ ನೀತು ಬಳೆಗಾರ್ ಎಂಬ ಮಹಿಳೆ ತನ್ನ ಕುಟುಂಬಸ್ಥರ ಜೊತೆ ಕಾರಿನಲ್ಲಿ ಹೋಗ್ತಿದ್ದರು. ಈ ವೇಳೆ ಕೆಲ ಪುಂಡರು ನಂಬರ್ ಪ್ಲೇಟ್ ಇಲ್ಲದ ಡ್ಯೂಕ್ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಯನ್ನ ನಿಂದಿಸಿದ್ದಾರೆ. ಸದ್ಯ ನೀತು ಅವರು ಈ ಘಟನೆ ಸಂಬಂಧ ಪುಂಡರ ಫೋಟೋ ಸಮೇತ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ಸೇಫ್ಟಿ ಇಲ್ಲ. ದಯ ಮಾಡಿ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ನೀತು ಅವರು ಎಕ್ಸ್ ಖಾತೆ ಮೂಲಕ ದೂರು ನೀಡಿ ಮನವಿ ಮಾಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com