ಚಿತ್ರದುರ್ಗ; ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ರೈತ ನ ಬಸವರಾಜ್ ಶವವಾಗಿ ಜಮೀನೊಂದರಲ್ಲಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ತುರುವನೂರಿನಲ್ಲಿ ನಡೆದಿದೆ.
ರೈತ ಬಸವರಾಜ್ ಕಳೆದ ಒಂದು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದರ ಬಗ್ಗೆ ಸಂಬಂಧಿಗಳು ತುರುವನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಹುಡುಕಿ ಸುಮ್ಮನಾಗಿದ್ದರು.
ಆದರೆ ಇಂದು ತುರುವನೂರು ಬಳಿಯ ಸಿದ್ದವ್ವನದುರ್ಗದ ಜಮೀನೊಂದರಲ್ಲಿ ಬಸವರಾಜ್ ತಲೆ ಬುರುಡೆ ಕಂಡು ಬಂದಿದೆ. ತಲೆ ಬುರುಡೆಯನ್ನು ನಾಯಿಯೊಂದು ಎಳೆದು ತಂದು ಹೊರಗೆ ಹಾಕಿತ್ತು.ಇದನ್ನು ಅಲ್ಲಿ ದನ ಮೇಯಿಸುತ್ತಿದ್ದ ದನಗಾಹಿಗಳು ನೋಡಿ ಗ್ರಾಮದ ಜನರಿಗೆ ಸುದ್ದಿ ಮುಟ್ಟಿಸಿದ್ದಾರೆ.ನಂತರ ಮೃತ ದೇಹವನ್ನು ಹುಡುಕಿಕೊಂಡು ಹೋದಾಗ ಭೂಮಿಯಲ್ಲಿ ಫ್ಲೋ ಹೊಡೆದು ಮಣ್ಣಿನ ಹೆಂಟೆಯಲ್ಲಿ ಇಡೀ ದೇಹವನ್ನು ಮುಚ್ಚಿ ಹಾಕಲಾಗಿದ್ದು.

ಕೂಡಲೇ ತುರುವನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. ಬಸರಾಜ್ ಜೂಜಾಟ ಚಟವಿದ್ದು, ಇದಕ್ಕಾಗಿ ಸಾಲ ಮಾಡಿದ್ದು, ಹಣ ಕೊಡದೆ ಹೋದಾಗ ಯಾರೋ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಸಾವಿನ ಸತ್ಯ ತಿಳಿಯಬೇಕಿದೆ.