ತಿರುಪತಿ ತಿರುಮಲ ದೇವಸ್ಥಾನ ಶ್ರೀ ಬಾಲಾಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆಗೆ ಬೆಂಗಳೂರು ಮೂಲದ ಭಕ್ತರೊಬ್ಬರು 1 ಕೋಟಿಗೂ ಅಧಿಕ ಹಣವನ್ನು ದಾನ ಮಾಡಿದ್ದಾರೆ.
ಟಿಟಿಡಿ ಆಡಳಿತದ ಶ್ರೀ ವೆಂಕಟೇಶ್ವರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಡಿ ಶ್ರೀ ಬಾಲಾಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ ಇದ್ದು.ಬಡವರು ಮತ್ತು ಅಂಗವಿಕಲರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳು ಒದಗಿಸುವ ಉದ್ದೇಶ ಹೊಂದಿದೆ.
ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇಗುಲ ತಿರುಪತಿಯ ಶ್ರೀ ವೆಂಕಟೇಶ್ವರ ದೇಗುಲದ ಮೇಲುಸ್ತುವಾರಿಯನ್ನು ಟಿಟಿಡಿ ನೋಡಿಕೊಳ್ಳುತ್ತಿದೆ.