ಟಿ20 ವಿಶ್ವಕಪ್ ಗೆದ್ದ 5 ದಿನಗಳ ಬಳಿಕ ಟೀಂ ಇಂಡಿಯಾ ತಂಡ ತವರಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ದೊರಕಿದೆ. ಜೊತೆಗೆ ನಿನ್ನೆ ಸಂಜೆ ಮುಂಬೈನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು. ಈ ವಿಜಯೋತ್ಸವದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ್ದರು. ನೂಕು ನುಗ್ಗಲುಗಳ ನಡುವೆ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಪ್ರಯತ್ನಿಸುತ್ತಿದ್ದಾಗ, ಹುಚ್ಚು ಅಭಿಮಾನಿಯೊಬ್ಬ ಮರವೇರಿ ಕುಳಿತು ವಿಜಯೋತ್ಸವ ಮೆರವಣಿಗೆ ವೀಕ್ಷಿಸಿದ್ದಾನೆ. ಈತನನ್ನು ಕಂಡು ತೆರೆದ ವಾಹನದಲ್ಲಿದ್ದ ಆಟಗಾರರು ಫುಲ್ ಶಾಕ್ ಆಗಿದ್ದಾರೆ. ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಮುಂಬೈನಲ್ಲಿ ತೆರೆದ ಬಸ್‌ನಲ್ಲಿ ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ನಡೆದಿದ್ದು, ನೆಚ್ಚಿನ ಆಟಗಾರರನ್ನು ನೋಡಲು ಮರಿನ್‌ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೂ ಜನಸಾಗರವೇ ತುಂಬಿತ್ತು. ಈ ನಡುವೆ ಕ್ರಿಕೆಟ್ ಅಭಿಮಾನಿಯೊಬ್ಬ ಮೆರವಣಿಗೆ ಸಂದರ್ಭದಲ್ಲಿ ಮರವೇರಿ ಕುಳಿತು, ತನ್ನ ನೆಚ್ಚಿನ ಆಟಗಾರರನ್ನು ಬಹಳ ಹತ್ತಿರದಿಂದ ನೋಡಿ ಖುಷಿಪಟ್ಟಿದ್ದಾನೆ. ಮಂಗನಂತೆ ಮರವೇರಿ ಕುಳಿತ ಈತನ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
https://twitter.com/mufaddal_vohra/status/1808929524978958447?ref_src=twsrc%5Etfw%7Ctwcamp%5Etweetembed%7Ctwterm%5E1808929524978958447%7Ctwgr%5Ef271aed63936a67ae774077aeef319142fe397b8%7Ctwcon%5Es1_&ref_url=https%3A%2F%2Ftv9kannada.com%2Ftrending%2Fa-cricket-lover-sat-in-the-forest-to-watch-the-world-cup-matches-the-photo-went-viral-trending-news-mda-861161.html
ಮುಫದಲ್ ಎಂಬವರು ಈ ಕುರಿತ ಸ್ವಾರಸ್ಯಕರ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಮರದ ಮೇಲೆ ಕುಳಿತಿದ್ದ ಈ ವ್ಯಕ್ತಿಯನ್ನು ಕಂಡು ಟೀಂ ಇಂಡಿಯಾ ಕ್ರಿಕೆಟಿಗರು ಹೆದರಿದರು” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಫೋಟೋದಲ್ಲಿ ನಿನ್ನೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಹುಚ್ಚು ಅಭಿಮಾನಿಯೊಬ್ಬ ಮರವೇರಿ ಕುಳಿತು ತನ್ನ ನೆಚ್ಚಿನ ಕ್ರಿಕೆಟಿಗರ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋವನ್ನು ಕಾಣಬಹುದು.
ಜುಲೈ 04 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿನ್ನೆಯಿಂದ ಈ ಯುವಕನೇ ಸಖತ್ ಫೇಮಸ್ ಆಗ್ತಿದ್ದಾನೆ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


