ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ದಾನ ಧರ್ಮಗಳ ಬಗ್ಗೆ.. ಅವರ ಸಾಮಾಜಿಕ ಸೇವೆಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸೂಪರ್ ಸ್ಟಾರ್ ಆದರೂ ರಜಿನಿಕಾಂತ್ ಹೃದಯ ಸದಾ ಬಡ ಜನರಿಗಾಗಿ ಮಿಡಿಯುತ್ತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಬಡಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡಲು ಸೂಪರ್ ಸ್ಟಾರ್ ರಜಿನಿಕಾಂತ್ ಚೆನ್ನೈ ಹೊರವಲಯದಲ್ಲಿ ಭಾರಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.
ಅನಾರೋಗ್ಯ ಕಾರಣ ರಾಜಕೀಯ ಎಂಟ್ರಿಯನ್ನು ರದ್ದು ಮಾಡಿದ್ದ ರಜಿನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಸೇವಾ ಸಂಘವಾಗಿ ಬದಲಿಸಿದ್ದರು. ಈಗ ಅದರ ಅಡಿಯೇ ಬಡವರಿಗಾಗಿ ಉಚಿತ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ.
ತಮಿಳುನಾಡಿನ ಚೆಂಗಲ್ಪಟ್ಟ ಜಿಲ್ಲೆಯ ತಿರುಪ್ಪುರ್ನಲ್ಲಿ 12 ಎಕರೆ ಜಮೀನನ್ನು ರಜಿನಿಕಾಂತ್ ಪರಿಶೀಲಿಸಿ ಫೈನಲ್ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಜಮೀನಿನ ರಿಜಿಸ್ಟ್ರೇಷನ್ ಕೂಡ ಆಗಿದೆ. ಶೀಘ್ರವೇ ಭೂಮಿ ಪೂಜೆ ಕೂಡ ನೆರವೇರಿಸಲಿದ್ದಾರೆ.
ಚೆನ್ನೈ-ತಿರುಪ್ಪುರ್ ನಡುವೆ 45 ಕಿಲೋಮೀಟರ್ ಅಂತರ ಇದೆ. ಸದ್ಯ ವೆಟ್ಟಯನ್ ಸಿನಿಮಾ ಶೂಟಿಂಗ್ನಲ್ಲಿ ನಟ ರಜಿನಿಕಾಂತ್ ಬ್ಯುಸಿ ಆಗಿದ್ದಾರೆ