ಫ್ರೀಡಂ ಟಿವಿಯ ಮತ್ತೊಂದು ರಾಜಕೀಯ ಎಕ್ಸ್ಕ್ಲೂಸಿವ್ ವರದಿಯು ಖುದ್ದು ಸಿಎಂ ಸಿದ್ದರಾಮಯ್ಯ ಅವರ ಬಾಯಿಂದಲೇ ಹೊರಬಿದ್ದಿದೆ. ಈ ಮೂಲಕ ಫ್ರೀಡಂ ಟಿವಿಯ ಎಕ್ಸ್ಕ್ಲೂಸಿವ್ ವರದಿಗಳು ಸತ್ಯಸ್ಯ ಸತ್ಯ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರುವ ಸುದ್ದಿ, ಅಬಕಾರಿ ಸಚಿವ ತಿಮ್ಮಾಪುರ್ ಅವರ ವಿರುದ್ಧದ ಹಗರಣದ ಸುದ್ದಿ, ಬಿಡಿಎ, BWSSB ಸುದ್ದಿಗಳು ಸೇರಿ ನಾವು ಬಿತ್ತರಿಸಿದ್ದ ಹಲವು ಸ್ಟೋರಿಗಳು ವಸ್ತುನಿಷ್ಠತೆಗೆ ಕನ್ನಡಿ ಹಿಡಿದಿವೆ.
ಇದರ ಬೆನ್ನಲ್ಲೆ ಫೆಬ್ರವರಿ 8 ರಂದು ’ಬಿಜೆಪಿ ಆಪರೇಷನ್ ಸೀಕ್ರೆಟ್ .. 50 MLAಗಳಿಗೆ ಸ್ಕೆಚ್..!’’ ಹೆಡ್ಲೈನ್ನಲ್ಲಿ ಫ್ರೀಡಂ ಟಿವಿ ಆಪರೇಷನ್ ಕಮಲ ಪ್ರಯತ್ನ ನಡೆಯುತ್ತಿರುವ ಬಗ್ಗೆ ಸ್ಪಷ್ಟ ವರದಿ ಪ್ರಸಾರ ಮಾಡಿತ್ತು. ನಮ್ಮ ವರದಿಯಲ್ಲಿ ಬಿಜೆಪಿಯ ಕೆಲವು ರಾಜ್ಯ ನಾಯಕರು ಅಹಮ್ಮದಾಬಾದ್ಗೆ ತೆರಳಿ ಆಪರೇಷನ್ ಕಮಲದ ರೂಪುರೇಷೆ ಸಿದ್ಧಪಡಿಸಿದ್ದು, ಜಾತಿವಾರು ಲೀಡರ್ಗಳನ್ನು ಪಟ್ಟಿ ಮಾಡಿ, ಸೆಳೆಯಲು ಮುಂದಾಗಿದ್ದ ಬಗ್ಗೆ ಮಾಹಿತಿ ನೀಡಲಾಗಿತ್ತು.
ಜೊತೆಗೆ ಆಪರೇಷನ್ ಕಮಲಕ್ಕೆ ಏನೆಲ್ಲಾ ಆಮಿಷವೊಡ್ಡಲಾಗಿದೆ..? ಯಾರ್ಯಾರನ್ನು ಸಂಪರ್ಕ ಮಾಡಲಾಗಿದೆ ಎಂಬುದನ್ನು ಹೇಳಿದ್ದೆವು. ಖುದ್ದು ಮುಖ್ಯಮಂತ್ರಿಗಳೇ ಇದೀಗ ನಮ್ಮ ಶಾಸಕರಿಗೆ ತಲಾ 50 ಕೋಟಿ ಆಫರ್ ಮಾಡಲಾಗಿದೆ . 135 ಶಾಸಕರಿದ್ದರೂ ಸರ್ಕಾರ ಬೀಳಿಸುವ ಪ್ರಯತ್ನ ನಡೆದಿದೆ ಎಂದು ಮೈಸೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಫ್ರೀಡಂ ಟಿವಿಯ ಖಚಿತ ಸುದ್ದಿಗಳಿಗೆ ಮತ್ತೊಮ್ಮೆ ಮನ್ನಣೆ ಸಿಕ್ಕಿದೆ. ಖಚಿತ ರಾಜಕೀಯ ವರದಿಗಳಿಗಾಗಿ ತಪ್ಪದೆ ವೀಕ್ಷಿಸಿ, ಫ್ರೀಡಂ ಟಿವಿ ಲೈವ್. ಕಾಂ ಮತ್ತು ಫ್ರೀಡಂ ಟಿವಿ.