Wednesday, April 30, 2025
30.3 C
Bengaluru
LIVE
ಮನೆ#Exclusive NewsTop NewsTV Anchor Kidnap; ಖ್ಯಾತ ಟಿವಿ ಆಂಕರ್ ಕಿಡ್ನಾಪ್ ಮಾಡಿದ ಯುವತಿ - ಮುಂದೇನಾಯ್ತು?

TV Anchor Kidnap; ಖ್ಯಾತ ಟಿವಿ ಆಂಕರ್ ಕಿಡ್ನಾಪ್ ಮಾಡಿದ ಯುವತಿ – ಮುಂದೇನಾಯ್ತು?

ಇದೊಂದು ವಿಚಿತ್ರ ಸ್ಟೋರಿ.. ಮ್ಯಾಟ್ರಿಮೋನಿ ವೆಬ್​ ಸೈಟ್​​ನಲ್ಲಿ ಯುವಕನೊಬ್ಬನ ಫೋಟೋ ನೋಡಿ ಫಿದಾ ಆದ ಓರ್ವ ಯುವತಿ, ಆತನನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿದಳು.. ಭೇಟಿ ಮಾಡಿ ಲವ್ ಪ್ರಪೋಸ್ ಮಾಡಿದಳು.. ಯುವಕ ಒಲ್ಲೆ ಎಂದ.. ಕಾಡಿಬೇಡಿದರು ಯುವಕ ಒಪ್ಪಲಿಲ್ಲ.. ಇದನ್ನು ಜೀರ್ಣಿಸಿಕೊಳ್ಳಲಾಗದ ಆಕೆ, ತಾನು ಇಷ್ಟ ಪಡ್ತಿದ್ದವನನ್ನು ನಾಲ್ವರ ಸಹಾಯದಿಂದ ಕಿಡ್ನಾಪ್ ಮಾಡಿಸಿ ಮದ್ವೆ ಆಗ್ತಿಯೋ ಇಲ್ವೋ ಎಂದು ಬೆದರಿಕೆ ಹಾಕಿದಳು. ಕೊನೆಗೆ ಇದು ಕೂಡ ವರ್ಕೌಟ್​ ಆಗಲಿಲ್ಲ. ಹೀಗಾಗಿ ಈಗ ಜೈಲಿನ ಕಂಬಿ  ಎಣಿಸತೊಡಗಿದ್ದಾಳೆ. ಈ ಫಿಲ್ಮಿ ಸ್ಟೈಲ್ ಘಟನೆ ನಡೆದಿರೋದು ನೆರೆಯ ರಾಜ್ಯ ತೆಲಂಗಾಣದ ಹೈದ್ರಾಬಾದ್​ನಲ್ಲಿ.

ಪೊಲೀಸರ ಮಾಹಿತಿ ಪ್ರಕಾರ; 27 ವರ್ಷದ ಪ್ರಣವ್ ಸಿಸ್ಟ್ಲಾ(Pranav Sistla) ಟಿವಿ ಆಂಕರ್​ ಕಮ್ ಸಾಫ್ಟ್​​ವೇರ್ ಉದ್ಯೋಗಿ. ಉಪ್ಪಲ್ ನಿವಾಸಿ.. ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಾದಾಪುರದ 31 ವರ್ಷದ ಭೋಗಿನೇನಿ ತ್ರೀಷ್ಣ (bhogireddy Trishna)ಈ ಹಿಂದೆ ಮದ್ವೆ ಆಗಿ ವಿಚ್ಛೇದನ ಪಡೆದಿದ್ದರು.. ಎರಡು ವರ್ಷದ ಹಿಂದೆ ಮ್ಯಾಟ್ರಿಮೋನಿಯಲ್ಲಿ ಟಿವಿ ಆಂಕರ್ ಪ್ರಣವ್ ಪ್ರೊಫೈಲ್​, ಫೋಟೋ ನೋಡಿ ವಾಟ್ಸಪ್​ ಮೂಲಕ ಸಂಪರ್ಕಿಸಿದಳು.

ವಿಶೇಷ ಅಂದರೆ, ಚೈತನ್ಯ ರೆಡ್ಡಿ ಎಂಬಾತ ಪ್ರಣವ್ ಫೋಟೋವನ್ನು ಮ್ಯಾಟ್ರಿಮೋನಿ ಪ್ರೊಫೈಲ್​ಗೆ ಬಳಸಿದ್ದ. ಇದನ್ನು ಪತ್ತೆ ಹಚ್ಚಿದ ತ್ರೀಷ್ಣ, ಪ್ರಣವ್ ಗಮನಕ್ಕೆ ತಂದಿದ್ದಳು. ಪ್ರಣವ್ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದ.

ಈ ಹಂತದಲ್ಲಿ ಪ್ರಣವ್​ಗೆ ತ್ರೀಷ್ಣ ಲವ್ ಪ್ರಪೋಸ್ ಮಾಡಿದಳು. ಆದರೆ ಆತ ಒಪ್ಪಲಿಲ್ಲ. ಪ್ರಣವ್ ಕಾರಿನಲ್ಲಿ ಆಪಲ್ ಏರ್ ಟ್ಯಾಗ್ ಟ್ರ್ಯಾಕರ್ ಅನ್ನು ಆತನಿಗೆ ಅಳವಡಿಸಿದಳು. ಕಾರ್ ಮೂಲಕ ಪ್ರಣವ್ ಎಲ್ಲಿ ಹೋಗ್ತಾನೆ ಎನ್ನುವುದನ್ನು ಟ್ರ್ಯಾಕ್ ಮಾಡತೊಡಗಿದಳು. ನಿತ್ಯ ಯಾವುದಾದರೊಂದು ರೂಪದಲ್ಲಿ ಪ್ರಣವ್​ನನ್ನು ಕಾಡಿಸತೊಡಗಿದಳು.ಆದರೆ,ಇದಕ್ಕೇನು ಪ್ರಣವ್ ತಲೆಡಿಸಿಕೊಳ್ಳಲಿಲ್ಲ.

ಹೀಗಾಗಿ ನಾಲ್ವರ ಮೂಲಕ ಪ್ರಣವ್​ನನ್ನು ಕಿಡ್ನಾಪ್ ಮಾಡಿಸಿ ಮದ್ವೆ ಆಗುವಂತೆ ಬೆದರಿಕೆ ಹಾಕಿದಳು. ಆದರೆ, ಪ್ರಣವ್ ಅದ್ಹೆಗೋ ಅವರಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ತೆರಳಿದ. ಸದ್ಯ ಭೋಗಿರೆಡ್ಡಿ ತ್ರೀಷ್ಣ ಅರೆಸ್ಟ್ ಆಗಿದ್ದಾಳೆ. ಈಕೆಗೆ ಸಹಕರಿಸಿದ ಪುಂಡರು ಪರಾರಿಯಲ್ಲಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments