Wednesday, January 28, 2026
23.8 C
Bengaluru
Google search engine
LIVE
ಮನೆರಾಜ್ಯಮದುವೆ ಮನೆಯಲ್ಲಿ ಗುಂಡಿನ ಸದ್ದು: ಕುಖ್ಯಾತ ಗ್ಯಾಂಗ್ ಸ್ಟರ್ ಖಲಾಸ್!

ಮದುವೆ ಮನೆಯಲ್ಲಿ ಗುಂಡಿನ ಸದ್ದು: ಕುಖ್ಯಾತ ಗ್ಯಾಂಗ್ ಸ್ಟರ್ ಖಲಾಸ್!

ಖುಷಿ ಖುಷಿಯಾಗಿದ್ದ ಮದುವೆ ಮನೆ ಕ್ಷಣ ಮಾತ್ರದಲ್ಲಿಯೇ ಮಸಣವಾಗಿ ಬಿಡ್ತು. ಮದುವೆಯಲ್ಲಿ ಭಾಗವಹಿಸಿದ್ದ ಗ್ಯಾಂಗ್ ಸ್ಟರ್ ಅಲ್ಲಿ ಹೆಣವಾಗಿ ಹೋಗಿದ್ದ. ಹೌದು…ಪಾಕಿಸ್ತಾನದ ಲಾಹೋರ್‌ನ ಚುಂಗ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭೂಗತ ಪಾತಕಿ ಅಮೀರ್ ಬಾಲಾಜ್ ಟಿಪ್ಪು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರು. ಖಾಸಗಿ ಟಿವಿ ಚಾನೆಲ್ ಮತ್ತು ಡಾನ್ ವರದಿಗಳ ಪ್ರಕಾರ, ಅಪರಿಚಿತ ದುಷ್ಕರ್ಮಿಗಳು ಬಾಲಾಜ್ ಮೇಲೆ ದಾಳಿ ಮಾಡಿದ್ದಾರೆ, ನಂತರ ಡಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಜಿನ್ನಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ವಿವಾಹ ಸಮಾರಂಭವೊಂದರಲ್ಲಿ ಪಾಕಿಸ್ತಾನದ ಗ್ಯಾಂಗ್ಸ್ಟರ್ ಅಮೀರ್ ಬಾಲಾಜ್ ಟಿಪ್ಪುವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಪರಿಚಿತ ವ್ಯಕ್ತಿಗಳು ಅಮೀರ್ ಮೇಲೆ ಗುಂಡು ಹಾರಿಸಿದ್ದಾರೆ, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ದುಷ್ಕರ್ಮಿಗಳು ಆತನ ಮತ್ತು ಇತರ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಆದಾಗ್ಯೂ, ಬಾಲಾಜ್‌ನ ಸಹಚರರು ತಕ್ಷಣವೇ ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ. ಚಿಕಿತ್ಸೆ ವೇಳೆ ಬಾಲಾಜ್ ಮೃತಪಟ್ಟರೆ, ಗಾಯಗೊಂಡ ಇಬ್ಬರು ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments