Monday, December 8, 2025
18.9 C
Bengaluru
Google search engine
LIVE
ಮನೆರಾಜ್ಯಮೈಸೂರಿನಲ್ಲಿ ಮಾರ್ಚ್ 6ರಿಂದ ಬಹುರೂಪಿ ನಾಟಕೋತ್ಸವ

ಮೈಸೂರಿನಲ್ಲಿ ಮಾರ್ಚ್ 6ರಿಂದ ಬಹುರೂಪಿ ನಾಟಕೋತ್ಸವ

ಮೈಸೂರು ; ಮಾರ್ಚ್ 6 ರಿಂದ 11 ರ ತನಕ ಮೈಸೂರಿನಲ್ಲಿ ಬಹುರೂಪಿ ನಾಟಕೋತ್ಸವ ನಡೆಯಲಿದೆ ಎಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸಂಚಾಲಕ ಉಮೇಶ್ ತಿಳಿಸಿದರು.

ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಉಮೇಶ್, ಆರು ದಿನಗಳ ಕಾಲ ಬಹುರೂಪಿ ನಾಟಕೋತ್ಸವ ನಡೆಯಲಿದ್ದು, ಇವ ನಮ್ಮವ ಇವ ನಮ್ಮವ ಎಂಬ ಆಶಯದೊಂದಿಗೆ ಈ ಭಾರಿ ಬಹುರೂಪಿ ನಾಟಕೋತ್ಸವ ಪ್ರಾರಂಭವಾಗಲಿದೆ. ಕನ್ನಡ ಮತ್ತು ವಿವಿಧ ಭಾಷೆ ಸೇರಿದಂತೆ ಒಟ್ಟು 17ನಾಟಕಗಳು ಪ್ರದರ್ಶನಗೊಳ್ಳಲಿವೆ.

ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮಾರ್ಚ್ 7ರಂದು ಬಹುರೂಪಿ ನಾಟಕೋತ್ಸವ ಉದ್ಘಾಟನೆ ಮಾಡಲಿದ್ದು, ನಾಟಕೋತ್ಸವದಲ್ಲಿ ಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಸಮಕಾಲಿನ ಗೋಷ್ಠಿಗಳು ನಡೆಯಲಿವೆ ಎಂದು ಉಮೇಶ್ ಮಾಹಿತಿ ನೀಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments