ಭಾರತೀಯ ಉಪಖಂಡದ ಕಾಶ್ಮೀರ ಪ್ರದೇಶದಲ್ಲಿ ಪ್ರತಿಷ್ಠಿತ ರಾಜಕೀಯ ಕುಟುಂಬದಲ್ಲಿ ಜನಿಸಿದ , ಕಾಶ್ಮೀರದ ಸಿಂಹ ಎಂದು ಕರೆಯಲ್ಪಡುವ ಶೇಖ್ ಮುಹಮ್ಮದ್ ಅಬ್ದುಲ್ಲಾರ ಪುತ್ರ ಫಾರೂಕ್ ಅಬ್ದುಲ್ಲಾ ಕೇವಲ ರಾಜಕಾರಣಿಯಾಗಿ ಗುರುತಿಸಿಕೊಳ್ಳದೆ, ತನ್ನ ಕೆಲ ರಾಷ್ಟ್ರೀಯವಾದ ಹೇಳಿಕೆ ಮೂಲಕವೂ ಆಗಾಗ ಚರ್ಚೆಗೆ ಬರುವ ಅಬ್ದುಲ್ಲಾ ರವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಫಾರೂಕ್ ಅಬ್ದುಲ್ಲಾ ತಾನು ಅದ್ಭುತ ಗಾಯಕ ಅನ್ನುವುದನ್ನು ಪದೇ ಪದೇ ಸಾಬೀತು ಮಾಡಿದ್ದಾರೆ.
೨೦೦೯ ರಲ್ಲಿ ಫಾರೂಕ್ ಅಬ್ದುಲ್ಲಾ ಹಾಡಿದ್ದ ಮೋರ್ ರಾಮ್ ಹಾಡು ದೇಶದಲ್ಲಿ ಭಾರಿ ಸಂಚಲವನ್ನೇ ಸೃಷ್ಠಿಸಿತ್ತು ,ಇತ್ತೀಚಿಗೆ ಕೇಂದ್ರ ಸರ್ಕಾರ ರದ್ದು ಮಾಡಿದ್ದ ಆರ್ಟಿಕಲ್ ೩೭೦ ವಿಚಾರ ವಿವಾದವಾದ ಸಂದರ್ಭದಲ್ಲಿಅ ಹಾಡು ಭಾರಿ ಸದ್ದು ಮಾಡಿತ್ತು.
ಯಾವ ಪ್ರೊಫೆಷನಲ್ ಗಾಯಕರಿಗೂ ಕಮ್ಮಿ ಇರದ ಫಾರೂಕ್ ಅಬ್ದುಲ್ಲಾರ ಗಾಯನ ಮತ್ತು ಅವರು ಆಯ್ಕೆ ಮಾಡಿಕೊಳ್ಳುವ ಗೀತೆ ಅವರಿಗೆ ಪ್ರಶಂಸೆಗಳ ಜೊತೆಗೆ ಅವರನ್ನ ವಿವಾದಗಳಿಗೂ ಸಿಲುಕಿಸಿ ಬಿಡುತ್ತದೆ.
ನಿನ್ನೆಯ ರಾಮಲಲ್ಲಾ ಮೂರ್ತಿ ಪ್ರತಿಸ್ಥಾಪನೆಯ ಕಾರ್ಯಕ್ರಮದಲ್ಲೂ ಭಾವುಕರಾಗಿದ್ದ ಫಾರೂಕ್ ಅಬ್ದುಲ್ಲಾರ ,ಮತ್ತೊಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ .