Wednesday, February 25, 2026
30.2 C
Bengaluru
Google search engine
LIVE
ಮನೆ#Exclusive NewsTop Newsಗೆಳೆಯನ ಮುಂದೆಯೇ 7 ಮಂದಿಯಿಂದ ಯುವತಿಯ ಮೇಲೆ ಗ್ಯಾಂಗ್ ರೇಪ್

ಗೆಳೆಯನ ಮುಂದೆಯೇ 7 ಮಂದಿಯಿಂದ ಯುವತಿಯ ಮೇಲೆ ಗ್ಯಾಂಗ್ ರೇಪ್

ಅಸ್ಸಾಂ: ಸಿಲ್ಚಾರ್ ಪಟ್ಟಣದಲ್ಲಿ ತನ್ನ ಗೆಳೆಯನೊಂದಿಗೆ ರಾತ್ರಿ ಊಟಕ್ಕೆ ತೆರಳಿದ್ದ ಯುವತಿಯ ಮೇಲೆ ಏಳು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಬೈಪಾಸ್ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದಾಗ ಏಕಾಏಕಿ ಮಹೀಂದ್ರಾ ಥಾರ್‌ನಲ್ಲಿ ಬಂದ ಪುರುಷರ ಗುಂಪು, ಮಹಿಳೆ ಮತ್ತು ಆಕೆಯ ಗೆಳೆಯನನ್ನು ಎಳೆದಾಡಿ, ಚಾಕು ತೋರಿಸಿ ಬೆದರಿಸಿದೆ. ಗೆಳೆಯನ ಮುಂದೆಯೇ ಕಾಮುಕರು ಒಬ್ಬೊಬ್ಬರಾಗಿ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಖಾತೆಯಿಂದ 10,000 ರೂಪಾಯಿ ಹಣವನ್ನು ಬಲವಂತವಾಗಿ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ. ಫೆಬ್ರವರಿ 19ರಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ಧೈರ್ಯ ಮಾಡಿ ಪೊಲೀಸ್ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಸಂತ್ರಸ್ತೆ ಇಬ್ಬರು ಆರೋಪಿಗಳಾದ ನೀಲೋತ್ಪಾಲ್ ದಾಸ್ ಮತ್ತು ಸುಬೋಲ್ ದಾಸ್‌ನನ್ನು ಗುರುತಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮತ್ತು ಹೇಳಿಕೆ ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಕಾನೂನು ಸುವ್ಯವಸ್ಥೆ ಕುರಿತು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments