ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ಗುಟ್ಕಾ, ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವುದನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇದರಿಂದ ಹೆಚ್ಚುತ್ತಿರುವ ನಕಾರಾತ್ಮಕ ಪ್ರಭಾವ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಗಮನಿಸಿ, ನಿಷೇಧಿಸಿ ತುರ್ತು ಆದೇಶ ಹೊರಡಿಸಿದ್ದಾರೆ .

ಬಸ್ಸುಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವ ನೇರ ಅಥವಾ ಪರೋಕ್ಷ ಯಾವುದೇ ಜಾಹೀರಾತು ಮಾಡಬಾರದು. ಈ ಸೂಚನೆ ಸಾರ್ವಜನಿಕರ ಹಿತದೃಷ್ಟಿಗಾಗಿ ತಕ್ಷಣ ಜಾರಿಗೆ ಬರಬೇಕು ಎಂದು ಹೇಳಿದ್ದಾರೆ.
ಹಿಂದೆ ಅಳವಡಿಸಲಾಗಿದ್ದ ಜಾಹೀರಾತುಗಳನ್ನು ಕೂಡ ತಕ್ಷಣ ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಕ್ರಮವು ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ನಿಷೇಧ ಜಾಗೃತಿಗೆ ಮತ್ತು ಯುವಜನರ ಸುರಕ್ಷತೆಗೆ ಮಹತ್ವಪೂರ್ಣವಾಗಿ ಸಹಾಯಮಾಡಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


