ತಿರುಮಲ ತಿರುಪತಿ ದೇವಸ್ಥಾನದ ನಿರ್ಬಂಧಿತ ಪ್ರದೇಶಗಳಲ್ಲಿ ಫೋಟೋಶೂಟ್ ನಡೆಸಿದ ಕಾರಣ ನವವಿವಾಹಿತ ದಂಪತಿ ವಿವಾದಕ್ಕೆ ಕಾರಣರಾಗಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ದಂಪತಿ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುತ್ತು ಕೊಟ್ಟು ಫೋಟೋಗೆ ಪೋಸ್ ನೀಡಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ದೇವಾಲಯದ ನಿಯಮ ಉಲ್ಲಂಘನೆ ಹಾಗೂ ಭದ್ರತಾ ಲೋಪಗಳ ಬಗ್ಗೆ ಪ್ರಶ್ನಿಸಿದ್ದಾರೆ , ವಿವಾದ ತೀವ್ರವಾಗುತ್ತಿದ್ದಂತೆ ನವವಿವಾಹಿತ ದಂಪತಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ನಿಯಮಗಳನ್ನು ತಿಳಿಸಿದ ನಂತರ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಫೋಟೋಶೂಟ್ ನಿಷೇಧಿತ ಎಂಬ ಮಾಹಿತಿ ತಿಳಿಯದೆ ಫೋಟೋ ತೆಗೆಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ತಿರುಮಲದ ಕಲ್ಯಾಣ ವೇದಿಕೆಯಲ್ಲಿ ತಿರುಮಲ ಮತ್ತು ಗಾಯತ್ರಿ ಮದುವೆಯಾಗಿದ್ದಾರೆ.. ಬಳಿಕ ನವ ದಂಪತಿ ದೇವಾಲಯದ ನಿಯಮಗಳನ್ನು ಉಲ್ಲಂಘಿಸಿ ಗೊಲ್ಲಮಂಟಪ ಸೇರಿದಂತೆ ನಿರ್ಬಂಧಿತ ಪ್ರದೇಶಗಳಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ ಎನ್ನಲಾಗಿದೆ. ಈ ಪ್ರದೇಶಗಳಲ್ಲಿ ವೃತ್ತಿಪರ ಫೋಟೋಶೂಟ್, ವೀಡಿಯೋಗ್ರಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ರೆಕಾರ್ಡ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.. ಆದರೂ ಫೋಟೋ ಶೂಟ್ ಮಾಡಿಸಿದ್ದರಿಂದ ಭಕ್ತರು ಹಾಗೂ ಯಾತ್ರಿಕರು ಅಸಮಾಧಾನಕ್ಕೆ ಕಾರಣವಾಗಿತ್ತು..


