ಕಲಬುರಗಿ: ಬಿಜೆಪಿ ನಾಯಕರ ಭಾಷಣದ ವೈಖರಿ ಮತ್ತು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ಮತ್ತು ಮುಸ್ಲಿಂ ಎಂಬ ನಾಲ್ಕು ಪದಗಳನ್ನು ಬಿಟ್ಟರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಬರುವುದೇ ಇಲ್ಲ, ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ಪೊಲೀಸರು ನೋಟಿಸ್ ನೀಡಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿಯವರು ದ್ವೇಷ ಭಾಷಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಬಿಎನ್ಎಸ್ (BNS) ಕಾಯ್ದೆಯ ಅಡಿಯೂ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಅದರಂತೆಯೇ ಪೊಲೀಸರು ನೋಟಿಸ್ ನೀಡಿರಬಹುದು,” ಎಂದರು.
ಸಿ.ಟಿ. ರವಿಯವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ. ಸದನದಲ್ಲಿ ಅವಾಚ್ಯವಾಗಿ ಮಾತನಾಡಿದ್ದಕ್ಕೆ ಸಂಬಂಧಿಸಿದಂತೆ ಅವರೇಕೆ ಇದುವರೆಗೆ ತಮ್ಮ ವಾಯ್ಸ್ ಸ್ಯಾಂಪಲ್ ಕೊಟ್ಟಿಲ್ಲ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಿಂದ ಉಚ್ಚಾಟಿತವಾಗಿರುವ ರಾಜೀವ್ ಗೌಡ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, “ನಾವು ತಪ್ಪು ಮಾಡಿದವರನ್ನು ಪಕ್ಷದಿಂದಲೇ ಹೊರಹಾಕಿದ್ದೇವೆ. ಆದರೆ ಬಿಜೆಪಿಯವರು ಪೋಕ್ಸೋ ಕೇಸ್ ಇರುವ ವ್ಯಕ್ತಿಗಳನ್ನು ವೇದಿಕೆಯಲ್ಲಿ ಪಕ್ಕದಲ್ಲೇ ಕೂರಿಸಿಕೊಳ್ಳುತ್ತಾರೆ,” ಎಂದು ತಿರುಗೇಟು ನೀಡಿದರು.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ರಾಜ್ಯಪಾಲರು ನಾವು ಬರೆದುಕೊಟ್ಟ ರಾಜ್ಯದ ನೀತಿಗಳನ್ನು ಓದದೆ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ನಾವು ಬರೆದ ಭಾಷಣದಲ್ಲಿ ಕೇಂದ್ರದ ವಿರುದ್ಧ ಯಾವುದೇ ಕೆಟ್ಟ ಶಬ್ದಗಳನ್ನು ಬಳಸದಿದ್ದರೂ, ರಾಜ್ಯಪಾಲರು ನಿಯಮಗಳಿಗೆ ಗೌರವ ನೀಡುತ್ತಿಲ್ಲ,” ಎಂದು ದೂರಿದರು.


