ಹುಬ್ಬಳ್ಳಿ: ತವರು ಮನೆಯಲ್ಲಿದ್ದ ಹೆಂಡತಿ ಕರೆದುಕೊಂಡು ಹೊಗಲು ಬಂದಿದ್ದ ಪತಿರಾಯ ಕ್ಷುಲ್ಲಕ ಕಾರಣಕ್ಕೆ ಮಾವನನ್ನು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ಗೌಶಿಯಾ ಟೌನ್ನಲ್ಲಿ ನಡೆದಿದೆ..
ಅಹ್ಮದ್ ರಜಾಕ್ ಶಹಪೂರ್ (48) ಮಾವನೆರ ಹತ್ಯೆಯಾದ ದುರ್ದೈವಿ. ಮೃತ ಅಹ್ಮದ್ ರಜಾಕ್ ಹಳೆ ಹುಬ್ಬಳ್ಳಿ ನಿವಾಸಿಯಾಗಿದ್ದು, ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಸದ್ದಾಂ ಎಂದು ಗುರುತಿಸಲಾಗಿದ್ದು, ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿ ಸದ್ದಾಂ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಪತ್ನಿಯನ್ನು ಕರೆದುಕೊಂಡು ಹೋಗಲು ಸದ್ದಾಂ ಮನೆಗೆ ಬಂದಿದ್ದು, ಮನೆಯ ಹೊರಗೆ ನಿಂತು ಗಲಾಟೆ ಮಾಡಿದ್ದಾನೆ. ಈ ವೇಳೆ ಅಹ್ಮದ್ ರಜಾಕ್ ಬುದ್ದಿಮಾತು ಹೇಳಿದ್ದಕ್ಕೆ ಕೋಪಗೊಂಡ ಆರೋಪಿ ಸದ್ದಾಂ ದಿಢೀರನೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ . ಘಟನೆಗೆ ಸಂಬಂಧಿಸಿದಂತೆ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿದಿದೆ.


